ಬೆಳಗಾವಿ: ಮಂಜುನಾಥ್ ಮುರುಕಿಭಾವಿ ಕೊಲೆ ಪ್ರಕರಣ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೊಲೆಯಾದ ಮೃತ ಮಂಜು ಮುರಕಿಭಾವಿ ಕುಟುಂಬಸ್ಥರಿಂದ ಸುದ್ದಿಗೋಷ್ಠಿ ನಡೆಸಿ ಬಬಲಿ ಕುಟುಂಬದ ಯುವತಿ ಮತ್ತು ಮಂಜುನಾಥ್ ಜೊತೆಗಿರುವ ಫೋಟೋ ಬಿಡುಗಡೆ ಮಾಡಿದ್ದಾರೆ. ಪ್ರೀತಿ ವಿಚಾರಕ್ಕೆ ಬಬಲಿ ಕುಟುಂಬದವರು ಮಂಜುನಾಥ್ನನ್ನು ಕೊಲೆ ಮಾಡಿದ್ದಾರೆ. ಈಗ ಕುಟುಂಬದವರು ಪ್ರಕರಣದ ದಿಕ್ಕು ಬದಲಾಯಿಸಲು ಪೊಲೀಸರ ಮಾಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕಳೆದ 2021ರ ಜುಲೈ 17ರಂದು ಗೋಕಾಕನ ಮಹಾಂತೇಶ ನಗರದ ಬಡಾವಣೆಯಲ್ಲಿ ಮಂಜುನಾಥ ಮುರಕಿಭಾವಿ ಕೊಲೆಯಾಗಿತ್ತು. ತಲೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಗೋಕಾಕ್‌ನ ಸಿದ್ದಪ್ಪ ಬಬಲಿ ಹಾಗೂ ಮಕ್ಕಳಾದ ಕೃಷ್ಣಾ, ಅರ್ಜುನ್ ಬಂಧಿಸಲಾಗಿದೆ. ಸಿದ್ದಪ್ಪ ಬಬಲಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.