ಕರ್ನಾಟಕ

karnataka

ETV Bharat / city

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ : ಡಾ.ಕೆ. ಸುಧಾಕರ್ - ಬೆಳಗಾವಿ ಉದ್ಧವ್​ ಠಾಕ್ರೆ

ಮಹಾರಾಷ್ಟ್ರದ ಜನರನ್ನು ಮೆಚ್ಚಿಸಲಿಕ್ಕೆ ಈ ರೀತಿ ಹೇಳುತ್ತಾರೆ. ಅದ್ರೆ, ಅದರಲ್ಲಿ ಯಾವುದೇ ವಾಸ್ತವಿಕ ಅಂಶ ಇಲ್ಲ. ಅವರ ರಾಜ್ಯದ ಜನರಿಗೆ ಹತ್ತಿರವಾಗಲು ಇಂತಹ ಮಾತುಗಳನ್ನಾಡುತ್ತಿದ್ದಾರೆ. ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ ಎಂದು ವೈದ್ಯಕೀಯ ಸಚಿವ ಕೆ. ಸುಧಾಕರ್​ ಹೇಳಿದರು.

belgaum-is-an-integral-part-of-the-state-of-karnataka
ಕೆ ಸುಧಾಕರ್

By

Published : Jan 18, 2021, 4:14 PM IST

ಚಿಕ್ಕೋಡಿ : ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದೆ ಅನ್ನೋದೆ ಮೂರ್ಖತನದ ಹೇಳಿಕೆ, ಓರ್ವ ಮುಖ್ಯಮಂತ್ರಿಯಾದವರು ಇತಿಹಾಸವನ್ನು ಸರಿಯಾಗಿ ಓದಿಕೊಂಡಿಲ್ಲ ಎಂದು ಹೇಳಬಹುದು. ಯಾವಾಗ ಏಕೀಕರಣ ಆಗಿದೆ ಅನ್ನೋ ಇತಿಹಾಸ ಮೊದಲು ತಿಳಿದುಕೊಳ್ಳಲಿ ಎಂದು ಆರೋಗ್ಯ ಹಾಗೂ ವೈದ್ಯಕೀಯ ಸಚಿವ ಕೆ. ಸುಧಾಕರ ಗುಡುಗಿದರು.

ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ಆಯೋಜಿಸಿರುವ ತಾಯಿ ಮಗು ಆಸ್ಪತ್ರೆ ಉದ್ಘಾಟನೆ ಹಾಗೂ ವೈದ್ಯರಿಗೆ ಸತ್ಕಾರ ಸಮಾರಂಭ ಮುಗಿದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದ ಜನರನ್ನು ಮೆಚ್ಚಿಸಲಿಕ್ಕೆ ಉದ್ಧವ್ ಠಾಕ್ರೆ ಈ ರೀತಿ ಹೇಳುತ್ತಾರೆ.

ಓದಿ-ನಾಳೆ ಅಥವಾ ನಾಡಿದ್ದು ಖಾತೆ ಹಂಚಿಕೆ: ಸಿಎಂ ಬಿ.ಎಸ್.ಯಡಿಯೂರಪ್ಪ

ಅದ್ರೆ, ಅದರಲ್ಲಿ ಯಾವುದೇ ವಾಸ್ತವಿಕ ಅಂಶ ಇಲ್ಲ. ಅವರ ರಾಜ್ಯದ ಜನರಿಗೆ ಹತ್ತಿರವಾಗಲು ಇಂತಹ ಮಾತುಗಳನ್ನಾಡುತ್ತಿದ್ದಾರೆ. ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ ಎಂದು ಹೇಳಿದರು.

ABOUT THE AUTHOR

...view details