ಬೆಳಗಾವಿ: ಲಾಕ್ ಡೌನ್ ನಿಂದ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಹಾಗೂ ಮಾರುಕಟ್ಟೆಗಳಿಲ್ಲದೇ ಕಂಗಾಲಾಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಜೋಳದಬೆಳೆ ರಾಶಿ ಮಾಡಿದ ರೈತರಿಗೆ ಬಂಗಾರದ ಬೆಲೆ ಬಂದಿದ್ದು ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುತ್ತಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳುಗಳ ಹಿಂದೆ ಕ್ವಿಂಟಲ್ ಜೋಳಕ್ಕೆ 2,500 ರಿಂದ 3,000 ರೂ ಇತ್ತು. ಆದರೆ ಈಗ ಬೆಲೆಯಲ್ಲಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ ಬಿಳಿ ಜೋಳಕ್ಕೆ 4,500 ರಿಂದ 5,000 ರೂ ದರದಲ್ಲಿ ಮಾರಾಟವಾಗುತ್ತಿವೆ. ಮಾರುಕಟ್ಟೆಯಲ್ಲಿ ಜೋಳದ ದರ ಗಗನಕ್ಕೆರಿರುವುದರಿಂದ ಬಡ ಹಾಗೂ ಮದ್ಯಮ ವರ್ಗದವರಿಗೆ ತೊಂದರೆ ಉಂಟಾಗಿದೆ.