ಬೆಳಗಾವಿ:ನಗರದ ಶೆಟ್ಟಿ ಬೀದಿಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಹಮ್ಮಿಕೊಂಡ ಹಸಿದವರತ್ತ ನಮ್ಮ ಚಿತ್ತ ಅಭಿಯಾನದ 83ನೇ ದಿನದ ಅಂಗವಾಗಿ ಭಜನಾ ತಂಡ, ಭಾವಗೀತೆ, ಹಾರ್ಮೋನಿಯಂ ಹಾಗೂ ತಬಲಾ ಕಲಾವಿದರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ - Belgaum News
ಕಲಾವಿದರಲ್ಲಿಯೇ ನಾವು ದೇವರನ್ನ ಕಾಣಬೇಕು. ಹಸಿದವರಿಗೆ ಆಹಾರ ನೀಡುವುದರಲ್ಲಿ ಸಿಗುವ ತೃಪ್ತಿ ಬೇರೆಲ್ಲೂ ಸಿಗುವುದಿಲ್ಲ. ಹೀಗಾಗಿ ಸಂಕಷ್ಟದಲ್ಲಿರುವವರ ನೆರವಿಗೆ ಉಳ್ಳವರು ಮುಂದೆ ಬರಬೇಕು ಎಂದು ಹಿರಿಯ ಪತ್ರಕರ್ತ ಕಲ್ಯಾಣರಾವ್ ಮುಚಳಂಬಿ ತಿಳಿಸಿದ್ದಾರೆ.
ನಗರದ ಶೆಟ್ಟಿ ಬೀದಿಯಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಕಲ್ಯಾಣರಾವ್ ಮುಚಳಂಬಿ, ಕೊರೊನಾ ವೈರಸ್ನಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ರಿಯಾ ಸಮಿತಿಯು ದಾನಿಗಳಿಂದ ಆಹಾರ ಧಾನ್ಯಗಳನ್ನ ಸಂಗ್ರಹಿಸಿ, ಸಂಕಷ್ಟಕ್ಕೆ ಒಳಗಾಗಿರೋ ಜನರಿಗೆ ತಲುಪಿಸುವ ಕಾರ್ಯ ಅತ್ಯಂತ ಶ್ರೇಷ್ಠ ಕಾಯಕವಾಗಿದೆ.
ಕಲಾವಿದರಲ್ಲಿಯೇ ನಾವು ದೇವರನ್ನ ಕಾಣಬೇಕು. ಹಸಿದವರಿಗೆ ಆಹಾರ ನೀಡುವುದರಲ್ಲಿ ಸಿಗುವ ತೃಪ್ತಿ ಬೇರೆಲ್ಲೂ ಸಿಗುವುದಿಲ್ಲ. ಹೀಗಾಗಿ ಸಂಕಷ್ಟದಲ್ಲಿರುವವರ ನೆರವಿಗೆ ಉಳ್ಳವರು ಮುಂದೆ ಬರಬೇಕು ಎಂದರು. ಇದೇ ವೇಳೆ ಕಲಾವಿದೆ ಖುಷಿ ಢವಳಿ ಎಂಬುವರು ಹಾಡಿದ "ಸೋಜಿಗದ ಸೂಜಿ ಮಲ್ಲಿಗೆ" ಎಂಬ ಹಾಡು ಎಲ್ಲರ ಗಮನ ಸೆಳೆಯಿತು.