ಬೆಳಗಾವಿ: ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜೀರಿಗೆ ಸಭಾಂಗಣದಲ್ಲಿ ಫ್ಯಾಷನ್ ಡಿಸೈನ್ ತಂತ್ರಜ್ಞಾನ ಸಂಸ್ಥೆ ವತಿಯಿಂದ ಫ್ಯಾಷನ್ ಶೋ 2022 ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಆಕರ್ಷಕ ಉಡುಪುಗಳನ್ನು ತೊಟ್ಟು ಮನಮೋಹಕವಾಗಿ ಹೆಜ್ಜೆ ಹಾಕಿದರು.
ಫ್ಯಾಷನ್ ಶೋ: ವಿದ್ಯಾರ್ಥಿನಿಯರ ಕ್ಯಾಟ್ ವಾಕ್.. ಮನಸೋತ ಕುಂದಾನಗರಿಯ ಜನರು - Fashion show in belagavi
ಬೆಳಗಾವಿಯಲ್ಲಿ ಫ್ಯಾಷನ್ ಡಿಸೈನ್ ತಂತ್ರಜ್ಞಾನ ಸಂಸ್ಥೆ ಆಶ್ರಯದಲ್ಲಿ ಫ್ಯಾಷನ್ ಶೋ-2022 ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಡಿಸಿಪಿ ಪಿ ವಿ ಸ್ನೇಹಾ ಚಾಲನೆ ನೀಡಿದರು. ಈ ವೇಳೆ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕ್ಯಾಟ್ ವಾಕ್ ನೋಡುಗರ ಮನಸೂರೆಗೊಳಿಸಿತು.
![ಫ್ಯಾಷನ್ ಶೋ: ವಿದ್ಯಾರ್ಥಿನಿಯರ ಕ್ಯಾಟ್ ವಾಕ್.. ಮನಸೋತ ಕುಂದಾನಗರಿಯ ಜನರು Belagavi students cat walk in Fashion show](https://etvbharatimages.akamaized.net/etvbharat/prod-images/768-512-16159672-thumbnail-3x2-bin.jpg)
ಬೆಳಗಾವಿಯಲ್ಲಿ ವಿದ್ಯಾರ್ಥಿನಿಯರ ಕ್ಯಾಟ್ ವಾಕ್ಗೆ ಮನಸೋತ ನೋಡುಗರು
ಬೆಳಗಾವಿಯಲ್ಲಿ ವಿದ್ಯಾರ್ಥಿನಿಯರ ಕ್ಯಾಟ್ ವಾಕ್ಗೆ ಮನಸೋತ ನೋಡುಗರು
ಕಳೆದ 2006ರಿಂದಲೂ ಕೆಎಲ್ಇ ಸಂಸ್ಥೆ ಫ್ಯಾಷನ್ ಟೆಕ್ನಾಲಜಿ ಕಾಲೇಜು ವತಿಯಿಂದ ಈ ಫ್ಯಾಷನ್ ಶೋ ಆಯೋಜಿಸಿಕೊಂಡು ಬರುತ್ತಿದೆ. ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯರು ಒಂದೊಂದು ಥೀಮ್ಗೆ ಅನುಸಾರವಾಗಿ ಡ್ರೇಸ್ಗಳನ್ನು ಡಿಸೈನ್ ಮಾಡಿದ್ದಾರೆ. ಹೀಗೆ ವಿದ್ಯಾರ್ಥಿನಿಯರೇ ಸಂಶೋಧಿಸಿದ 27 ಥೀಮ್ಗಳಿಗೆ ವಿದ್ಯಾರ್ಥಿನಿಯರು ರ್‍ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿದರು.
ಇದನ್ನೂ ಓದಿ:ಬಾಲಕನಿಗೆ ಶ್ರೀಕೃಷ್ಣನ ಪೋಷಾಕು ತೊಡಿಸಿ ಸಂಭ್ರಮಿಸಿದ ಮುಸ್ಲಿಂ ಕುಟುಂಬ