ಅಥಣಿ (ಬೆಳಗಾವಿ):ಕೋವಿಡ್ ತಡೆಯುವ ನಿಟ್ಟಿನಲ್ಲಿ ಆರ್ಟಿಪಿಸಿಆರ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯದ ಒಳ ಬರುವುದಕ್ಕೆ ಕೆಲ ಚೆಕ್ ಪೋಸ್ಟ್ಗಳಲ್ಲಿ ಅವಕಾಶ ನೀಡಲಾಗುತ್ತಿದೆ. ಆದ್ರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಟ್ರಾವೆಲ್ಸ್ ಏಜೆನ್ಸಿಗಳು ನಕಲಿ ಕೊರೊನಾ ನೆಗೆಟಿವ್ ರಿಪೋರ್ಟ್ ನೀಡಿ ಹಣ ಮಾಡಿಕೊಳ್ಳುತ್ತಿದ್ದರು. ನಿಪ್ಪಾಣಿ ಪೊಲೀಸರು ಇಂತಹ ಒಂದು ಜಾಲವನ್ನು ಬೇಧಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ ನಗರದಲ್ಲಿ ನಕಲಿ ಕೋವಿಡ್ ರಿಪೋರ್ಟ್ ರಚಿಸಿ ರಾಜ್ಯಕ್ಕೆ ಜನರನ್ನು ತಂದು ಬಿಡುತ್ತಿದ್ದ ಟ್ರಾವೆಲ್ ಏಜೆನ್ಸಿಗಳ ಬಗ್ಗೆ ನಿಪ್ಪಾಣಿ ಪೊಲೀಸರ ಗಮನಕ್ಕೆ ಬಂದಿತ್ತು. ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ನಕಲಿ ವರದಿಯನ್ನು ನೀಡುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ.