ಬೆಳಗಾವಿ: ಬೆಳಗಾವಿ(belagavi) ತಾಲೂಕಿನ ಹಲಗಾ-ಮಚ್ಛೆ ಬೈಪಾಸ್ ರಸ್ತೆ(halga Machhe Bypass Road project ) ಕಾಮಗಾರಿಗೆ ರೈತರು ವಿರೋಧಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ರೈತರ ಮಧ್ಯೆ ನಡೆಯುತ್ತಿದ್ದ ಸಭೆ(belagavi meeting) ಅರ್ಧಕ್ಕೆ ಮೊಟಕುಗೊಂಡಿದೆ.
ನಿನ್ನೆ ಬೆಳಗ್ಗೆ ಮಚ್ಛೆ ಗ್ರಾಮ(machhe village) ದಲ್ಲಿ ನಡೆಯುತ್ತಿದ್ದ ಕಾಮಗಾರಿ ವಿರೋಧಿಸಿ ರೈತರು ಪ್ರತಿಭಟನೆ(belagavi protest) ನಡೆಸಿದ್ದರು. ಈ ವೇಳೆ, ಡಿಸಿ ಜೊತೆಗೆ ಸಭೆ(belagavi farmers meeting with dc) ಆಯೋಜಿಸುವ ಭರವಸೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ ಸಂಜೆ ಡಿಸಿ ಎಂ.ಜಿ ಹಿರೇಮಠ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು.
ಕಾಮಗಾರಿ ನಿಲ್ಲಿಸುವಂತೆ ಮನವಿ:
ಸಭೆಯಲ್ಲಿ ಡಿಸಿ ಎದುರು ರೈತ ಮಹಿಳೆ ತನ್ನ ಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸೋನಾಮಸೂರಿ ಅಕ್ಕಿ, ಗೋಧಿ ಸೇರಿ ಇತರ ಬೆಳೆ ಬೆಳೆಯುವ ಫಲವತ್ತಾದ ಜಮೀನಿದೆ. ನಮಗೆ ಪರಿಹಾರ ಬೇಡ, ಇದೇ ರೀತಿಯ ಫಲವತ್ತಾದ ಜಮೀನು ಕೊಡಿ. ಇಂದು ಪೊಲೀಸರು ನಮ್ಮನ್ನು ವಶಕ್ಕೆ ಪಡೆಯುವ ವೇಳೆ ನನ್ನ ಸೀರೆ ಹರಿದು ಹೋಗಿದೆ ಎಂದು ಅಳಲು ತೋಡಿಕೊಂಡು ಕಾಮಗಾರಿ ನಿಲ್ಲಿಸುವಂತೆ ರೈತ ಮಹಿಳೆ ಸೆರೆಗೊಡ್ಡಿ ಕೋರಿ ಕೊಂಡರು.