ಕರ್ನಾಟಕ

karnataka

ETV Bharat / city

ಬೈಕ್​ನಲ್ಲಿ ನೈಟ್ ರೌಂಡ್ಸ್ ಹಾಕಿದ ಬೆಳಗಾವಿ ಶಾಸಕ.. ಬೀದಿ ದೀಪಗಳ ದುರಸ್ತಿಗೆ ವಾರದ ಗಡುವು - ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ನ್ಯೂಸ್​

ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ನಿನ್ನೆ ರಾತ್ರಿ ಬೈಕ್​ನಲ್ಲಿ ರೌಂಡ್ಸ್ ಹಾಕಿ ವಿದ್ಯುತ್ ದೀಪಗಳ ಕಾರ್ಯ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.

MLA Anil benake
ಬೈಕ್​ನಲ್ಲಿ ರೌಂಡ್ಸ್ ಹಾಕಿದ ಬೆಳಗಾವಿ ಶಾಸಕ ಅನಿಲ್ ಬೆನಕೆ

By

Published : Nov 10, 2021, 11:51 AM IST

ಬೆಳಗಾವಿ: ರಾತ್ರಿ ವೇಳೆ ಬೆಳಗಾವಿಯ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಬೆನಕೆ ಅಧಿಕಾರಿಗಳ ಜೊತೆ ಮಂಗಳವಾರ ನೈಟ್ ರೌಂಡ್ಸ್ ಹಾಕಿದರು.

ನಗರದ ಕಾಲೇಜು ರಸ್ತೆ, ಕೆಎಲ್ಇ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಕ್ಯಾಂಪ್ ರಸ್ತೆಗಳಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಸಕರಿಗೆ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಸೇರಿದಂತೆ ಪಾಲಿಕೆ ಅಧಿಕಾರಿಗಳು ಸಾಥ್ ನೀಡಿದರು.

ಬೈಕ್​ನಲ್ಲಿ ರೌಂಡ್ಸ್ ಹಾಕಿದ ಬೆಳಗಾವಿ ಶಾಸಕ ಅನಿಲ್ ಬೆನಕೆ

ಹೈ ಮಾಸ್ಕ್ ಸೇರಿ ಅಲಂಕಾರಿಕ ಬೀದಿ ದೀಪಗಳೆಲ್ಲವೂ ರಾತ್ರಿ ವೇಳೆ ಆಫ್ ಆಗಿವೆ. ರಾತ್ರಿ 9 ಗಂಟೆ ಬಳಿಕ ಮಹಿಳೆಯರು, ಜನ ಸಾಮಾನ್ಯರು ಓಡಾಡುವುದಕ್ಕೆ ಭಯ ಪಡುವ ಸ್ಥಿತಿ ಇದೆ. ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪ ಇದ್ದರೂ ಉರಿಯುತ್ತಿಲ್ಲ, ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಹಾಗೂ ಬೀದಿದೀಪಗಳ ನಿರ್ವಹಣೆ ಗುತ್ತಿಗೆ ಪಡೆದವರಿಗೆ ಗಡುವು ನೀಡಿದರು.

ABOUT THE AUTHOR

...view details