ಕರ್ನಾಟಕ

karnataka

ETV Bharat / city

ಟಿಸಿ ಮಂಜೂರಾತಿಗೆ 60 ಸಾವಿರ ರೂ. ಲಂಚದ ಬೇಡಿಕೆ: ಹೆಸ್ಕಾಂ ಅಧಿಕಾರಿ, ಸಿಬ್ಬಂದಿ ಎಸಿಬಿ ಬಲೆಗೆ

ಲಂಚ​ ಪಡೆಯುತ್ತಿದ್ದಾಗ ಹೆಸ್ಕಾಂ ಉಪವಿಭಾಗದ ಸೆಕ್ಷನ್ ಆಫೀಸರ್ ಪ್ರಕಾಶ ಪರೀಟ್ ಹಾಗೂ ಸಿಬ್ಬಂದಿ ಮಲ್ಲಯ್ಯ ಹಿರೇಮಠ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

belagavi-hescom-officer-and-staff-caught-to-acb-while-getting-bribes
ಹೆಸ್ಕಾಂ ಲಂಚ ಬೇಡಿಕೆ

By

Published : Jan 29, 2021, 10:33 PM IST

ಬೆಳಗಾವಿ: ಹೊಲಕ್ಕೆ ಟಿಸಿ ಮಂಜೂರು ಮಾಡಲು 60 ಸಾವಿರ ರೂ. ಲಂಚ ಪಡೆಯುತ್ತಿದ್ದ ಗೋಕಾಕ್​ ಹೆಸ್ಕಾಂ ಉಪವಿಭಾಗದ ಸೆಕ್ಷನ್ ಆಫೀಸರ್ ಹಾಗೂ ಇನ್ನೋರ್ವ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಸೆಕ್ಷನ್ ಆಫೀಸರ್ ಪ್ರಕಾಶ ಪರೀಟ್ ಹಾಗೂ ಸಿಬ್ಬಂದಿ ಮಲ್ಲಯ್ಯ ಹಿರೇಮಠ ಎಸಿಬಿ ಬಲೆಗೆ ಬಿದ್ದವರು ಎನ್ನಲಾಗಿದೆ. ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಓದಿ-ಮಗಳ ಎದುರೇ ಭೀಕರವಾಗಿ ಕೊಲೆಯಾದ ತಾಯಿ: 'ಸೋಷಿಯಲ್ ಮೀಡಿಯಾ' ಸ್ನೇಹಿತನಿಂದ ಕೃತ್ಯ!

ಅರಭಾವಿಯ ಆನಂದ ಧರ್ಮಟ್ಟಿ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಎಸ್ಪಿ ಬಿ.ಎಸ್.ನ್ಯಾಮಗೌಡರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ಇನ್ಸ್​​​ಪೆಕ್ಟರ್​ಗಳಾದ ಎ.ಎಸ್.ಗುದಿಗೊಪ್ಪ ಮತ್ತು ಸುನಿಲಕುಮಾರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ABOUT THE AUTHOR

...view details