ಬೆಳಗಾವಿ: ಧಾರವಾಡ ಜಿಲ್ಲೆಯ ಬಾಡ ಗ್ರಾಮದ ಬಳಿ ಶುಕ್ರವಾರ ಮಧ್ಯೆರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಬಾಲಕಿಯೂ ಒಬ್ಬಳಾಗಿದ್ದಾಳೆ.
ದೊಡವಾಡ ಗ್ರಾಮದ 14 ವರ್ಷದ ಬಾಲಕಿ ಅನನ್ಯ ಮಲ್ಲಪ್ಪ ಹುತಮ್ಮಲ್ಲನವರ್ ಮೃತ ಬಾಲಕಿ. ಹುಟ್ಟೂರು ದೊಡವಾಡ ಗ್ರಾಮದಲ್ಲಿ ಅನನ್ಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.