ಬೆಳಗಾವಿ:ಮಹಾರಾಷ್ಟ್ರ ಗಡಿ ಅಂತರಾಜ್ಯ ತಪಾಸಣಾ ಕೇಂದ್ರಗಳಲ್ಲಿ ಕೊರೊನಾ ತಡೆಗೆ ಕಳೆದ 60 ದಿನಗಳಿಂದ ಮುನ್ನೆಚ್ಚರಿಕೆ ಕ್ರಮವಹಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ರಾಜ್ಯ ಗುಪ್ತಚರ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಜಿಲ್ಲಾಡಳಿತವನ್ನು ಪ್ರಶಂಸಿಸಿ ಪತ್ರ ಬರೆದಿರುವ ರಾಜ್ಯಗುಪ್ತಚರ ಇಲಾಖೆ ಎಡಿಜಿಪಿ ಕಮಲಪಂತ. ಅಂತರರಾಜ್ಯ ಕೋವಿಡ್ -19 ಸರ್ವಲೆನ್ಸ್ ಚೆಕ್ ಪೋಸ್ಟ್ ನಿಪ್ಪಾಣಿ - ಕೂಗನೊಳ್ಳಿಯಲ್ಲಿ ಮಾಡಲಾದ ವ್ಯವಸ್ಥೆಯ ಚಿತ್ರಗಳು ತಮ್ಮ ಮನಸ್ಸು ಗೆದ್ದಿರುವುದಾಗಿ, ಚೆಕ್ ಪೋಸ್ಟ್ ನಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಕ್ರಮಗಳು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಏರ್ಪಾಡು ಮಾಡಿರುವುದು. ಕೊರೊನಾ ತಡೆಗೆ ಸೂಕ್ತ ಪೂರ್ವತಯಾರಿ & ಸಮಯೋಚಿತ ಆಡಳಿತದ ನಡೆ ಎಂದಿದ್ದಾರೆ.