ಬೆಳಗಾವಿ: ವಿಶ್ವೇಶ್ವರಯ್ಯ ನಗರದ ಸರ್ಕಾರಿ ಪಿಡಬ್ಲೂಡಿ ಕ್ವಾಟರ್ಸನಲ್ಲಿ ಪಿಡಬ್ಲೂಡಿ ಇಲಾಖೆಯ ಡಿ ದರ್ಜೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಜಿಲ್ಲೆಯ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ಬಸವರಾಜ ರಾಮು ದೇವಮಾನೆ(34) ಆತ್ಮಹತ್ಯೆ ಮಾಡಿಕೊಂಡಿರುವ ನೌಕರ.
ಬಸವರಾಜ ಇಂದು ವಿಶ್ವೇಶ್ವರಯ್ಯ ನಗರದ ಸರ್ಕಾರಿ ಪಿಡಬ್ಲೂಡಿ ಇಲಾಖೆಯ ಸರ್ಕಾರಿ ಕ್ವಾಟರ್ಸನಲ್ಲಿರುವ ಫ್ಯಾನಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲತಃ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ನಿವಾಸಿ ಆಗಿರುವ ಮೃತ ಬಸವರಾಜ ಮತ್ತು ಆತನ ಪತ್ನಿ ಸಂಗೀತ ಇಬ್ಬರೂ ಕೂಡ ಬೆಳಗಾವಿಯ ಪಿಡಬ್ಲೂಡಿ ಸರ್ಕಲ್ ಕಚೇರಿಯಲ್ಲಿ ಡಿ ದರ್ಜೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ.