ಬೆಳಗಾವಿ:ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಆಗಿ, ನೂರರ ಗಡಿ ದಾಟಿದೆ. ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿರುವ ಕೋವಿಡ್ ಬುಲೆಟಿನ್ನಲ್ಲಿ ಶುಕ್ರವಾರ 110 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ.
ಅಥಣಿಯಲ್ಲಿ 12, ಬೆಳಗಾವಿ ತಾಲೂಕಿನಲ್ಲಿ 14, ಹುಕ್ಕೇರಿ 02, ಚಿಕ್ಕೋಡಿ, ಗೋಕಾಕ, ಖಾನಾಪೂರ, ಸವದತ್ತಿ ತಾಲೂಕಿನಲ್ಲಿ ತಲಾ 5 ಸೋಂಕಿತ ಪ್ರಕರಣಗಳು ದಾಖಲಾಗಿದ್ದರೆ ರಾಮದುರ್ಗ ತಾಲೂಕಿನಲ್ಲಿ ಅತಿಹೆಚ್ಚು 62 ಸೋಂಕಿತ ಪ್ರಕರಣ ದಾಖಲಾಗಿವೆ.