ಬೆಳಗಾವಿ :ಇಲ್ಲಿನ ಎಪಿಎಂಸಿ ಠಾಣೆಯ ಎಂಟು ಜನ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ಕುಂದಾನಗರಿಯ ಪೊಲೀಸರಿಗೂ ಕೊರೊನಾ ವೈರಾಣು ಮತ್ತೆ ಕಾಟ ಕೊಡಲು ಆರಂಭಿಸಿದೆ.
ಸೋಂಕಿತ ಪೊಲೀಸ್ ಸಿಬ್ಬಂದಿಗೆ ಹೋಮ್ ಐಸೊಲೇಷನ್ ಮಾಡಲಾಗಿದೆ. ಸೋಂಕಿತರಿಗೆ ಯಾವುದೇ ರೋಗದ ಲಕ್ಷಣಗಳಿಲ್ಲ. ಈ ಕಾರಣಕ್ಕೆ ಎಲ್ಲರಿಗೂ ಹೋಮ್ ಐಸೊಲೇಷನ್ ಆಗುವಂತೆ ಆರೋಗ್ಯ ಸಿಬ್ಬಂದಿ ಸಲಹೆ ನೀಡಿದ್ದಾರೆ.
ಓದಿ:ಪಾಕ್ ಪಿತೂರಿಯಿಂದ ಮುಳುಗಿದ ಯುದ್ಧನೌಕೆ ಈಗ ಸ್ಮಾರಕವಾಗಿ ಪುನರ್ ನಿರ್ಮಾಣ
ರಾಜ್ಯದ ಇತರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ನಿನ್ನೆ ನಗರ ಪೊಲೀಸರಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಕರ್ತವ್ಯದಲ್ಲಿದ್ದವರಿಗೆ ಸಮೀಪದ ಆರೋಗ್ಯ ಕೇಂದ್ರ ಹಾಗೂ ಉಳಿದವರಿಗೆ ಪೊಲೀಸ್ ಹೆಡ್ ಕ್ವಾಟರ್ಸ್ನಲ್ಲಿ RTPCR ಮಾಡಲಾಗಿತ್ತು. ಈ ವೇಳೆ, ಎಪಿಎಂಸಿ ಠಾಣೆಯ 8 ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.
350 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೋಂಕು :ಜಿಲ್ಲೆಯ ಮಕ್ಕಳನ್ನು ಕೊರೊನಾ ಬಿಟ್ಟು ಬಿಡದೇ ಕಾಡುತ್ತಿದೆ. ಕಿತ್ತೂರು ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಮತ್ತೆ ಕೋವಿಡ್ ಸ್ಫೋಟಗೊಂಡಿದೆ. ವಿದ್ಯಾರ್ಥಿನಿಯರು, ಸಿಬ್ಬಂದಿ ಸೇರಿ ಮತ್ತೆ 49 ಜನರಿಗೆ ಕೊರೊನಾ ಸೋಂಕು ತಗುಲಿದೆ. ಕಳೆದ ಒಂದು ವಾರದಲ್ಲಿ 190ಕ್ಕೂ ಹೆಚ್ಚು ಜನರಿಗೆ ಕೋವಿಡ್ ವಕ್ಕರಿಸಿದೆ.
ನಿಪ್ಪಾಣಿ ಖಾಸಗಿ ಪಿಯು ಕಾಲೇಜಿನಲ್ಲಿ 16 ವಿದ್ಯಾರ್ಥಿಗಳಿಗೆ, ಅಥಣಿ ತಾಲೂಕಿನ ಬಣಜವಾಡ ರೆಸಿಡೆನ್ಷಿಯಲ್ ಪಿಯು ಕಾಲೇಜಿನ 16 ವಿದ್ಯಾರ್ಥಿಗಳಿಗೆ ಕೋವಿಡ್, ಬೆಳಗಾವಿ ಖಾಸಗಿ ಶಾಲೆಯ 7 ಸಿಬ್ಬಂದಿ, ಓರ್ವ ವಿದ್ಯಾರ್ಥಿಗೆ ಕೋವಿಡ್ ಸೋಂಕು ತಗುಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ.