ಕರ್ನಾಟಕ

karnataka

ETV Bharat / city

ಲಕ್ಷ್ಮಿ ಹೆಬ್ಬಾಳ್ಕರ್ ಕೃಪೆಯಿಂದಲೇ ರಮೇಶ ‌ಮಂತ್ರಿ ಆಗಿದ್ದು: ಸತೀಶ್ ಜಾರಕಿಹೊಳಿ ಬಾಂಬ್​ - ಸತೀಶ್ ಜಾರಕಿಹೊಳಿ ಲೇಟೆಸ್ಟ್​ ಸುದ್ದಿ

ಹಿಂದಿನ ಕಾಂಗ್ರೆಸ್ ‌ಸರ್ಕಾರದಲ್ಲಿ ರಮೇಶ ಮಂತ್ರಿ ಆಗಲು ಡಿಕೆಶಿ ಹಾಗೂ ಹೆಬ್ಬಾಳ್ಕರ್ ಕಾರಣ. ಹೆಬ್ಬಾಳ್ಕರ್ ‌ಕೃಪೆ ಆಶೀರ್ವಾದದಿಂದಲೇ ರಮೇಶ ‌ಜಾರಕಿಹೊಳಿ ಮಂತ್ರಿ‌ ಆಗಿದ್ದು ಎಂದು ಶಾಸಕ ಸತೀಶ ಜಾರಕಿಹೊಳಿ ಸ್ಫೋಟಕ ‌ಮಾಹಿತಿ ಹೊರಹಾಕಿದ್ದಾರೆ.

ಶಾಸಕ ಸತೀಶ ಜಾರಕಿಹೊಳಿ

By

Published : Nov 17, 2019, 12:48 PM IST

ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸಿನಲ್ಲಿ ಪವರ್ ಫುಲ್ ಲೀಡರ್, ಹೆಬ್ಬಾಳ್ಕರ್ ‌ಕೃಪೆ ಆಶೀರ್ವಾದದಿಂದಲೇ ರಮೇಶ ‌ಜಾರಕಿಹೊಳಿ ಮಂತ್ರಿ‌ ಆಗಿದ್ದು ಎಂದು ಶಾಸಕ ಸತೀಶ ಜಾರಕಿಹೊಳಿ ಸ್ಫೋಟಕ ‌ಮಾಹಿತಿ ಹೊರಹಾಕಿದ್ದಾರೆ.

ಶಾಸಕ ಸತೀಶ ಜಾರಕಿಹೊಳಿ

ಗೋಕಾಕ್​ ನಗರದ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ‌ಸರ್ಕಾರದಲ್ಲಿ ರಮೇಶ ಮಂತ್ರಿ ಆಗಲು ಡಿಕೆಶಿ ಹಾಗೂ ಹೆಬ್ಬಾಳ್ಕರ್ ಕಾರಣ. ರಮೇಶ ಓರ್ವ ಹುಚ್ಚ, ಈತನನ್ನೇಕೆ ಮಂತ್ರಿ‌ ಮಾಡಿದ್ರಿ ಎಂದು ಡಿಕೆಶಿ ಹಾಗೂ ಹೆಬ್ಬಾಳ್ಕರ್ ವಿರುದ್ಧ ನಾನು ಅಸಮಾಧಾನಗೊಂಡಿದ್ದೆ. ಅದನ್ನು‌ ಬಿಟ್ಟರೆ ಈ ಇಬ್ಬರ ಮಧ್ಯೆ ವೈಯಕ್ತಿಕ ದ್ವೇಷ ನನಗಿರಲಿಲ್ಲ.‌ ರಮೇಶನೇ ಡಿಕೆಶಿಯನ್ನು ಮಂತ್ರಿ ಮಾಡಲು ಹೊರಟಿದ್ದರು. ಜೊತೆಗೆ ಸಿದ್ದರಾಮಯ್ಯನವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದಾಗಿ ರಮೇಶನೇ ಹಲವು ಸಲ ಹೇಳಿದ್ದರು. ಈಗ ಇದೇ ರಮೇಶ ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮಾತನಾಡುತ್ತಿದ್ದಾರೆ. ಗೋಕಾಕ್​ ಪ್ರಚಾರಕ್ಕೆ ಡಿಕೆಶಿ ಹಾಗೂ ಹೆಬ್ಬಾಳ್ಕರ್ ಇಬ್ಬರನ್ನೂ ಕರೆಸುತ್ತೇವೆ. ಅವರೇ ರಮೇಶ ವಿರುದ್ಧ ತಮ್ಮ ಅಭಿಪ್ರಾಯ ‌ಹೇಳುತ್ತಾರೆ ಎಂದು ಬಾಂಬ್ ಸಿಡಿಸಿದರು.

ನಾಳೆ ಮೆರವಣಿಯ ಮೂಲಕ ಸಾಗಿ ಲಖನ್ ಜಾರಕಿಹೊಳಿ‌ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲೆಯ ನಾಯಕರು, ಶಿವಾನಂದ ಪಾಟೀಲ್ ಆಗಮಿಸಲಿದ್ದಾರೆ ಎಂದರು.

ಇನ್ನು ಕಾಂಗ್ರೆಸ್​ನಲ್ಲಿ ಕೈಚೀಲ ಹಿಡಿಬೇಕು, ಬಾಗಿಲು‌ ಕಾಯಬೇಕು ಅಂತವರಿಗೆ ಮಾತ್ರ ಬೆಲೆ ಎಂಬ ರಮೇಶ ಜಾರಕಿಹೊಳಿ‌ ಹೇಳಿಕೆಗೆ ತಿರುಗೇಟು ನೀಡಿದ ಸತೀಶ, 25 ವರ್ಷ ರಮೇಶ ಜಾರಕಿಹೊಳಿ‌ ಸಹ ಕೈಚೀಲ ಹಿಡಿದಿದ್ದಾನೆ. ಯಾವುದೇ ಪಕ್ಷದಲ್ಲಾದರು ಸ್ವಾಮಿನಿಷ್ಠೆ ಬೇಕು. ರಾಜಕೀಯದಲ್ಲಿ ಬೆಳೆಯೋಕೆ ಗಾಡ್ ಫಾದರ್ ಬೇಕೆ ಬೇಕು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಈ ಸಂಸ್ಕೃತಿ ಇದೆ‌. ಕೈಚೀಲ ಹಿಡಿಯೋದು ಅಂದ್ರ ಚಮಚಾಗಿರಿ ಮಾಡೋದು ಅಂತ ಅಲ್ಲ. ರಮೇಶ ಜಾರಕಿಹೊಳಿ‌ ಶಂಕ್ರಾನಂದ್ ಅವರ ಕೈಚೀಲ ಹಿಡಿದು ಓಡಾಡಿದ್ರು. ಹೆಬ್ಬಾಳ್ಕರ್, ಡಿಕೆಶಿ ಹಾಗೂ ರಮೇಶ ಜಾರಕಿಹೊಳಿ‌ ಒಂದೇ ಗ್ರೂಪ್​ನಲ್ಲಿ ಇದ್ದವರು. ಆನಂತರ ಸಮಸ್ಯೆಯಾಗಿ ರಮೇಶ ಹೊರ ಬಂದಿದ್ದಾರೆ ಎಂದರು.

ಷೇರು ಮಾರುಕಟ್ಟೆಯ ರೀತಿ ರಮೇಶ ಜಾರಕಿಹೊಳಿ‌ ಅವರ ನಾಯಕರು ಬದಲಾಗುತ್ತಾರೆ. ರಮೇಶ ಮೊದಲು ಕೆ ಹೆಚ್ ಪಾಟೀಲ್, ಎಸ್. ಎಂ. ಕೃಷ್ಣ ನಂತರ ಸಿದ್ದರಾಮಯ್ಯ ನಮ್ಮ ಲೀಡರ್ ಅಂದ್ರು. ರಮೇಶ ತನಗೆ ಹೇಗೆ ಬೇಕು ಹಾಗೆ ಬದಲಾವಣೆ ಆಗುತ್ತಾನೆ. ಸುಳ್ಳು ಹೇಳುವುದರಲ್ಲಿ ರಮೇಶಗೆ ಪಿಹೆಚ್​ಡಿ ಆಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ‌ಮನೆಗೆ ಈ ಹಿಂದೆ ಚಹಾ ಕುಡಿಯಲು ಹೋಗಿದ್ದು ನಿಜ. ಈಗ ಹೋಗಿಲ್ಲ, ಇನ್ನೂ ಮುಂದೆ ಹೋಗುತ್ತೇನೆ ಎಂದರು.

ಗೋಕಾಕ್ ಉಸ್ತುವಾರಿ ಹೊಣೆ ಲಕ್ಷ್ಮೀ ಹೆಬ್ಬಾಳ್ಕರ್​ ಹೊತ್ತಿರುವುದರಿಂದ ಇನ್ಮುಂದೆ ಚಹಾ, ಊಟಕ್ಕೆ ಲಕ್ಷ್ಮಿ ಮನೆಗೆ ಹೋಗುತ್ತೇನೆ. ಇನ್ಮುಂದೆ ನಾನು, ಡಿಕೆಶಿ ‌ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಒಂದೇ. ಮೊದಲಿನಿಂದ ರಮೇಶ ಜಾರಕಿಹೊಳಿ‌ ಸ್ವಾರ್ಥಿ. ನಾನು ಮೊದಲಿನಿಂದಲೂ ರಮೇಶನನ್ನು ವಿರೋಧಿಸುತ್ತೇನೆ. ಲಖನ್​ ಮೊದಲಿನಿಂದಲೂ ಕಾಂಗ್ರೆಸ್ ನಲ್ಲಿಯೇ ಇದ್ದಾರೆ. ರಮೇಶನ ಮೆದುಳು ಖಾಲಿ ಇದೆ. ಅವರನ್ನು ಗಂಭೀರವಾಗಿ ಪರಿಗಣಿಸಬೇಡಿ. ರಮೇಶ ತಲೆ ಮೊಬೈಲ್ ಇದ್ದ ಹಾಗೇ, ಯಾವಾಗ ಬೇಕಾದ್ರು ಹ್ಯಾಂಗ್ ಆಗುತ್ತೆ ಎಂದು ಕಿಚಾಯಿಸಿದರು.

ನಿನ್ನೆ ಬೆಳಗಾವಿಯಲ್ಲಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್​, ಲಕ್ಷ್ಮಿ ಹೆಬ್ಬಾಳ್ಕರ್​ರನ್ನು ನನ್ನ ತಲೆ ಮೇಲೆ ಕೂರಿಸಲು ಯತ್ನಿಸಿದ್ದರು ಎಂದು ಆರೋಪಿಸಿದ್ದರು.

ABOUT THE AUTHOR

...view details