ಬೆಳಗಾವಿ : ಗೋಡಂಬಿ ಆರಿಸಲು ಹೋದಾಗ ಯುವಕನ ಮೇಲೆ ಕರಡಿಯೊಂದು ದಾಳಿ ಮಾಡಿರುವ ಘಟನೆ ತಾವರಗಟ್ಟಿ ಗ್ರಾಮದಲ್ಲಿ ಕಂಡು ಬಂದಿದೆ.
ಹೋಗಿದ್ದು ಗೋಡಂಬಿ ಆರಿಸೋಕೆ.. ಆದರೆ, ಜಾಂಬವಂತ ಏಕಾಏಕಿ ಮೇಲೆ ಎರಗಿದ್ದ - undefined
ಯುವಕ ಗೋಡಂಬಿ ಆರಿಸಲು ಹೋದಾಗ ಕರಡಿ ದಾಳಿ ಮಾಡಿದ್ದು, ಘಟನಾ ಸ್ಥಳಕ್ಕೆ ಆರ್ಎಫ್ಒ ರತ್ನಾಕರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
![ಹೋಗಿದ್ದು ಗೋಡಂಬಿ ಆರಿಸೋಕೆ.. ಆದರೆ, ಜಾಂಬವಂತ ಏಕಾಏಕಿ ಮೇಲೆ ಎರಗಿದ್ದ](https://etvbharatimages.akamaized.net/etvbharat/prod-images/768-512-3199973-thumbnail-3x2-lek.jpg)
ಯುವಕನ ಮೇಲೆ ಕರಡಿ ದಾಳಿ
ತಾವರಗಟ್ಟಿ ಗ್ರಾಮದ ಗಣೇಶ್ ಪಾಟೀಲ್ ಎಂಬಾತ ಕರಡಿ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡ ಯುವಕ. ಗಣೇಶ್ನ ತಲೆಗೆ ಗಂಭೀರ ಗಾಯಗಳಾಗಿದ್ದು, ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಆರ್ಎಫ್ಒ ರತ್ನಾಕರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.