ಕರ್ನಾಟಕ

karnataka

ETV Bharat / city

ಅವಿರೋಧವಾಗಿ ಆಯ್ಕೆಯಾದ ಸದಸ್ಯರನ್ನ ಸನ್ಮಾನಿಸಿದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ - BDCC Bank President ramesh katti

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಒಂದು ವಾರ್ಡ್​ಗೆ 1977ರಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ ನಡೆದದ್ದು ಬಿಟ್ಟರೆ, ಈವರೆಗೂ ಯಾವುದೇ ಚುನಾವಣೆ ನಡೆದಿಲ್ಲ. ಪ್ರತಿ ಬಾರಿಯೂ ಅವಿರೋಧ ಆಯ್ಕೆ ಮಾತ್ರ ನಡೆಯುತ್ತಿದೆ..

BDCC Bank President ramesh katti
ಅವಿರೋಧವಾಗಿ ಆಯ್ಕೆಯಾದ ಸದಸ್ಯರನ್ನ ಸನ್ಮಾನಿಸಿದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ

By

Published : Dec 15, 2020, 7:37 PM IST

ಚಿಕ್ಕೋಡಿ (ಬೆಳಗಾವಿ) :ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ 9 ವಾರ್ಡ್​ಗಳಿಗೆ 33 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಅವರನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ತಮ್ಮ ಸ್ವಗೃಹಕ್ಕೆ ಕರೆಯಿಸಿ ಸನ್ಮಾನ ಮಾಡಿದರು.

ಅವಿರೋಧವಾಗಿ ಆಯ್ಕೆಯಾದ ಸದಸ್ಯರನ್ನ ಸನ್ಮಾನಿಸಿದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ..

ಹುಕ್ಕೇರಿ‌ ಶಾಸಕ ಉಮೇಶ್ ಕತ್ತಿ ಹಾಗೂ ಮಾಜಿ ಸಂಸದ ರಮೇಶ್​ ಕತ್ತಿ ಅವರ ಮೂಲ ಗ್ರಾಮವಾದ ಬೆಲ್ಲದ ಬಾಗೇವಾಡಿಯ ಜನರು ಕಳೆದ 7 ದಶಕಗಳಿಂದ ಗ್ರಾಮ ಪಂಚಾಯತ್‌ ಚುನಾವಣೆ ಮಾಡಿ, ಕೈಗೆ ಶಾಯಿ ಹಾಕಿಸಿಕೊಂಡ ಉದಾಹರಣೆಯೇ ಇಲ್ಲ.

1977ರಲ್ಲಿ ಗ್ರಾಮದ ಒಂದು ವಾರ್ಡ್​ಗೆ ಚುನಾವಣೆ ನಡೆದದ್ದು ಬಿಟ್ಟರೆ, ಈವರೆಗೂ ಯಾವುದೇ ಚುನಾವಣೆ ನಡೆದಿಲ್ಲ. ಪ್ರತಿ ಬಾರಿಯೂ ಅವಿರೋಧ ಆಯ್ಕೆ ಮಾತ್ರ ನಡೆಯುತ್ತಿದೆ. ಸದ್ಯ ಗ್ರಾಮದ 9 ವಾರ್ಡ್​ಗಳಿಗೆ 33 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.

ಅವರನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ತಮ್ಮ ಸ್ವಗೃಹಕ್ಕೆ ಕರೆಸಿ ಸನ್ಮಾನ ಮಾಡಿ, ಗ್ರಾಮದ ಏಳಿಗೆಗಾಗಿ ಶ್ರಮಿಸುವಂತೆ ಮನವಿ ಮಾಡಿದರು.

ABOUT THE AUTHOR

...view details