ಬೆಳಗಾವಿ: ಶ್ರೀಮಂತಿಕೆಗೆ ಬೆಲೆ ಕೊಡಲ್ಲ ಅನ್ನೋದಕ್ಕೆ ಜನ ಉತ್ತರ ನೀಡಿದ್ದಾರೆ ಎಂದು ಬೆಂಗಳೂರು ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಕುರಿತು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.
ಶ್ರೀಮಂತಿಕೆಗೆ ಬೆಲೆ ಕೊಡಲ್ಲ ಅನ್ನೋದಕ್ಕೆ ಜನ ಉತ್ತರ ನೀಡಿದ್ದಾರೆ: ಎಸ್.ಆರ್ ವಿಶ್ವನಾಥ್ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಪರಿಷತ್ ಚುನಾವಣೆಯ ಬೆಂಗಳೂರು ನಗರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಜಯಗಳಿಸಿದ್ದಾರೆ. 400ಕ್ಕೂ ಹೆಚ್ಚು ಮತಗಳಿಂದ ಜಯಶಾಲಿಯಾಗಿದ್ದಾರೆ. ಜನಪ್ರತಿನಿಧಿಗಳಿಂದ ಜನಪ್ರತಿನಿಧಿಗಳಿಗೆ ಒಂದು ಸಂದೇಶ ಹೋಯ್ತು. ಹಣದ ಬಲದಿಂದ ಗೆಲ್ಲುತ್ತೇನೆ ಅಂತ ಅನ್ಕೊಂಡಿದ್ರು ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಅದ್ಯಾರೋ ಕೆಜಿಎಫ್ ಬಾಬು ಅವರು ಡಿ.ಕೆ. ಶಿವಕುಮಾರ್ ನಿಂದ ರಾಜಕಾರಣಕ್ಕೆ ಬಂದಿದ್ದು ಎಂದು ಹೇಳಿಕೊಂಡಿದ್ದಾರೆ. 15 ಲಕ್ಷದಿಂದ ಸಾವಿರಾರು ಕೋಟಿ ಮಾಡಿದೆ ಎಂದಿದ್ದಾರೆ. ಇದೆಲ್ಲಾ ಶ್ರೀಮಂತಿಕೆಯ ಅಸಹ್ಯವನ್ನ ತೋರಿಸುತ್ತದೆ ಎಂದಿದ್ದಾರೆ. ಬೆಂಗಳೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಗೆಲುವು ಸಾಧಿಸಿರುವುದಕ್ಕೆ ವಿಶ್ವನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಪರಿಷತ್ ಫಲಿತಾಂಶ : 'ಕೈ' ಕೆಡವಿ ಗೆದ್ದ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ