ಅಥಣಿ: ಯಡಿಯೂರಪ್ಪನಂತೆ ನಾನು ಕೂಡ ಈಗ ಒಬ್ಬ ಉತ್ತರ ಕರ್ನಾಟಕದ ಲೀಡರ್ ಆಗಿದ್ದೇನೆ. ನನ್ನನ್ನು ತುಳಿಯೋಕೆ ಯಾರಿಂದಲೂ ಆಗುವುದಿಲ್ಲ ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.
ಪಕ್ಷ ನಿಷ್ಠೆಯ ಜೊತೆ ರಗಡ್ ಆಗಿ ಮತ ಯಾಚನೆ ಮಾಡಿದ ಯತ್ನಾಳ್...! - ಬಸನಗೌಡ ಪಾಟೀಲ್ ಯತ್ನಾಳ್ ಅಥಣಿ ನ್ಯೂಸ್
ಯಡಿಯೂರಪ್ಪನಂತೆ ನಾನು ಕೂಡ ಈಗ ಒಬ್ಬ ಉತ್ತರ ಕರ್ನಾಟಕದ ಲೀಡರ್ ಆಗಿದ್ದೇನೆ. ನನ್ನನ್ನು ತುಳಿಯೋಕೆ ಯಾರಿಂದಲೂ ಆಗುವುದಿಲ್ಲ ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.
ಅಥಣಿ ಉಪಚುಣಾವಣೆ ಹಿನ್ನೆಲೆ ಇಂದು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರವಾಗಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ ವಿರುದ್ದ ಲೇವಡಿ ಮಾಡಿದರು. ಕಳೆದ ಎರಡು ದಿನಗಳಿಂದ ಲಕ್ಷ್ಮೀ ಪಟಾಕಿಯನ್ನ ಮಹೇಶ್ ಕುಮಟಳ್ಳಿ ಠುಸ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ರು.
ಇನ್ನು ಯಡಿಯೂರಪ್ಪನವರ ಸರ್ಕಾರ ಮೂರುವರೆ ವರ್ಷ ಸಂಪೂರ್ಣವಾಗಿ ಪೂರೈಸಲಿದೆ. ಈ ಉಪಚುನಾವಣೆಯಲ್ಲಿ 15 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಯಡಿಯೂರಪ್ಪನಂತೆ ನಾನು ಕೂಡ ಈಗ ಒಬ್ಬ ಉತ್ತರ ಕರ್ನಾಟಕದ ಲೀಡರ್ ಆಗಿದ್ದೇನೆ. ಪ್ರವಾಹದ ಸಂದರ್ಭದಲ್ಲಿ ನಾನು ಸಂತ್ರಸ್ತರ ಪರ ನಿಂತಿದ್ದೇನೆ. ನನ್ನನ್ನ ಬಿಎಸ್ವೈ ಮಂತ್ರಿ ಮಾಡೋದಿಲ್ಲ. ಆದರೂ ನಾನು ಜನ ಪರ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದರು.