ಬೆಳಗಾವಿ:ಠೇವಣಿ ಹಣ ಮರಳಿಸದ್ದಕ್ಕೆ ನೊಂದ ಗ್ರಾಹಕರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ.
ಬೆಳಗಾವಿಯ ಗೋಕಾಕದಲ್ಲಿ ಬ್ಯಾಂಕ್ ಗ್ರಾಹಕ ಸಾವು ಗೋಕಾಕಿನ ಜಗದ್ಗುರು ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಸೊಸೈಟಿ, ಅವಧಿ ಮುಗಿದರೂ ಗ್ರಾಹಕರಿಗೆ ಠೇವಣಿ ಹಣ ಮರಳಿಸಿಲ್ಲ. ಹೀಗಾಗಿ ಚಿಕಿತ್ಸೆಗೆ ಹಣ ಇಲ್ಲದೇ ಗೋಕಾಕ್ನ ಬಸವರಾಜ್ ಆದರಗಿ (40) ಮೃತಪಟ್ಟಿದ್ದಾರೆ.
ಹೀಗಾಗಿ ನೊಂದ ಸಂಬಂಧಿಕರು ಹಾಗೂ ಇತರ ಗ್ರಾಹಕರು ಸೊಸೈಟಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು. ಈ ಸೊಸೈಟಿಯಿಂದ ಬಸವರಾಜ್ಗೆ 3,70,000 ರೂ. ಠೇವಣಿ ಹಣ ಬರಬೇಕಿತ್ತು. ಹಣ ನೀಡದೆ ಸೊಸೈಟಿಯ ಆಡಳಿತ ಮಂಡಳಿ ಗ್ರಾಹಕರಿಗೆ ಸತಾಯಿಸುತ್ತಿದೆ. ಈಗಾಗಲೇ ಠೇವಣಿ ಹಣ ಸಿಗದೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಗ್ರಾಹಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗೋಕಾಕ್ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.