ಕರ್ನಾಟಕ

karnataka

ETV Bharat / city

ಬ್ಯಾಂಕ್ ಅಕೌಂಟ್​ ಹ್ಯಾಕ್ ಮಾಡಿ ₹94.71 ಲಕ್ಷ ಹಣ ಎಗರಿಸಿದ್ದ ಮೂವರ ಬಂಧನ - Belgaum SP Laxman Nimbaragi

ಇಂದ್ರೇಶ್ ಪಾಂಡೆ ಹಾಗೂ ಅಭಿಜಿತ್​ ಹ್ಯಾಕ್ ಮಾಡಲು ಡಮ್ಮಿ ಅಕೌಂಟ್ ಕ್ರಿಯೇಟ್ ಮಾಡುತ್ತಿದ್ದರು. ಟೋನಿ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸುತ್ತಿದ್ದ. ಸದ್ಯ ಪ್ರಕರಣದಲ್ಲಿ ಪ್ರಾಥಮಿಕವಾಗಿ ಮೂವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದರು..

chikkodi
ಬಂಧಿತ ಆರೋಪಿ

By

Published : Jul 2, 2021, 11:12 AM IST

ಚಿಕ್ಕೋಡಿ(ಬೆಳಗಾವಿ) :ಅರಿಹಂತ ಸಂಸ್ಥೆಯ ಜನರಲ್ ಮ್ಯಾನೇಜರ್ ಅಶೋಕ್ ಬಂಕಾಪುರ ಅವರ ಐಸಿಐಸಿಐ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ‌ 94.71 ಲಕ್ಷ ರೂ. ಎಗರಿಸಿದ್ದ ಮೂವರು ಖದೀಮರನ್ನು ಬಂಧಿಸಲಾಗಿದೆ.

ಮುಂಬೈಯಲ್ಲಿ ನೈಜೀರಿಯಾ ಮೂಲದ ಬುಜುಕಾ ಪೀಟರ್ ಚಿಗೋಜಿ (40), ಇಂದ್ರೇಶ್ ಹರಿಶಕಂರ್ ಪಾಂಡೆ, ಅಭಿಜಿತ್ ಘನಶ್ಯಾಮ್ ಮಿಶ್ರಾ ಬಂಧಿತರು.

ಬೆಳಗಾವಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ

ಈ ಕುರಿತು ಪ್ರತಿಕ್ರಿಯಿಸಿದ ಬೆಳಗಾವಿ ಎಸ್‌ಪಿ ಲಕ್ಷ್ಮಣ ನಿಂಬರಗಿ, ಆರೋಪಿಗಳು ಆಫ್ರಿಕಾ ಹಾಗೂ ಮುಂಬೈಯಲ್ಲಿ ಕುಳಿತು ಆನ್‌ಲೈನ್ ಮೂಲಕ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸುತ್ತಿದ್ದರು. ಆಫ್ರಿಕಾ ದೇಶದಲ್ಲಿರುವ ಟೋನಿ ಎಂಬ ವ್ಯಕ್ತಿ ಸಂಪೂರ್ಣ ಹ್ಯಾಕಿಂಗ್ ಜಾಲಕ್ಕೆ ಸೂತ್ರಧಾರ.

ಇಂದ್ರೇಶ್ ಪಾಂಡೆ ಹಾಗೂ ಅಭಿಜಿತ್​ ಹ್ಯಾಕ್ ಮಾಡಲು ಡಮ್ಮಿ ಅಕೌಂಟ್ ಕ್ರಿಯೇಟ್ ಮಾಡುತ್ತಿದ್ದರು. ಟೋನಿ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸುತ್ತಿದ್ದ. ಸದ್ಯ ಪ್ರಕರಣದಲ್ಲಿ ಪ್ರಾಥಮಿಕವಾಗಿ ಮೂವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದರು.

ಇದನ್ನೂ ಓದಿ:ಕನಸನ್ನು ನನಸು ಮಾಡಿಕೊಂಡ ಮಿಸ್ಟರ್ ಅಂಡ್​ ಮಿಸ್ಸಸ್ ರಾಮಚಾರಿ!

ABOUT THE AUTHOR

...view details