ಕರ್ನಾಟಕ

karnataka

ETV Bharat / city

ಬೆಳಗಾವಿಯಲ್ಲಿ ಇನ್ನೂರಕ್ಕೂ ಹೆಚ್ಚು ಜನರ ಮತಾಂತರ ಯತ್ನ?: ಹಿಂದೂಪರ ಸಂಘಟನೆಗಳಿಂದ ತಡೆ - ಬೆಳಗಾವಿ ಮರಾಠ ಕಾಲೋನಿ ಮತಾಂತರಕ್ಕೆ ಯತ್ನ ಸುದ್ದಿ

ಇನ್ನೂರಕ್ಕೂ ಹೆಚ್ಚು ಜನರ ಮತಾಂತರಕ್ಕೆ ಯತ್ನಿಸುತ್ತಿದ್ದ ಘಟನೆ ಬೆಳಗಾವಿ ನಗರದ ಮರಾಠಾ ಕಾಲೊನಿಯಲ್ಲಿ ನಡೆದಿದೆ ಎಂಬ ಮಾಹಿತಿ ದೊರೆತಿದೆ. ಈ ವೇಳೆ ಸ್ಥಳಕ್ಕೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಆಗಮಿಸಿ ಪಾದ್ರಿ ಎಂದು ಹೇಳಲಾದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡರು.

attempts-to-religious-conversion-in-belagavi-maratha-colony
ಮತಾಂತರಕ್ಕೆ ಯತ್ನ

By

Published : Nov 7, 2021, 5:22 PM IST

ಬೆಳಗಾವಿ: ಇನ್ನೂರಕ್ಕೂ ಅಧಿಕ ಜನರ ಮತಾಂತರಕ್ಕೆ ಯತ್ನಿಸುತ್ತಿದ್ದ ಘಟನೆ ಇಲ್ಲಿನ ಮರಾಠಾ ಕಾಲೊನಿಯಲ್ಲಿ ನಡೆದಿದೆ. ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಮತಾಂತರವನ್ನು ತಡೆದಿದ್ದಾರೆ.


ಮತಾಂತರ ಮಾಡುತ್ತಿದ್ದ ಕಟ್ಟಡಕ್ಕೆ ಹಿಂದೂಪರ ಕಾರ್ಯಕರ್ತರ ಮುತ್ತಿಗೆ ಹಾಕಿದರು. ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಿಂದ ಇನ್ನೂರಕ್ಕೂ ಅಧಿಕ ಜನರು ಆಗಮಿಸಿದ್ದರು. ಪ್ರತಿ ಭಾನುವಾರ ಮತಾಂತರ ಮಾಡುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದ್ದರು. ಈ ವೇಳೆ ಪಾದ್ರಿ ಎಂದು ಹೇಳಲಾಗುವ ವ್ಯಕ್ತಿಯನ್ನು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.

ಹಿಂದೂ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕೆಲವರು ಪ್ರಾರ್ಥನೆ ಮೊಟಕುಗೊಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಕಟ್ಟಡದಲ್ಲಿ ಜಮಾವಣೆಗೊಂಡವರನ್ನು ಕೂಡಿಹಾಕಲಾಗಿದೆ. ಸ್ಥಳದಲ್ಲಿ ಇಪ್ಪತ್ತಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಟೀಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details