ಕರ್ನಾಟಕ

karnataka

ETV Bharat / city

ಅಥಣಿ ಪುರಸಭೆ: ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್​ಗೆ ಜಯಭೇರಿ - congress win the more seat in ULB Election

ಅಥಣಿ ಪುರಸಭೆ ಚುನಾವಣೆಯು 27 ಸ್ಥಾನಗಳಿಗೆ ನಡೆದಿದ್ದು 99 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಅಥಣಿ ಪುರಸಭೆ
ಅಥಣಿ ಪುರಸಭೆ

By

Published : Dec 30, 2021, 12:59 PM IST

ಬೆಳಗಾವಿ: ಅಥಣಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಅಥಣಿ ಪುರಸಭೆ ಚುನಾವಣೆಯು 27 ಸ್ಥಾನಗಳಿಗೆ ನಡೆದಿದ್ದು 99 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಕಾಂಗ್ರೆಸ್ ಅಭ್ಯರ್ಥಿಗಳು 15 ಸ್ಥಾನ ಮತ್ತು ಬಿಜೆಪಿ - 9 ಸ್ಥಾನ ಹಾಗೂ 3 ಮಂದಿ ಪಕ್ಷೇತರರು ಗೆದ್ದು ನಗೆ ಬೀರಿದ್ದಾರೆ.

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಅಥಣಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದಾರೆ. 15 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆಯ್ಕೆ ಮಾಡಿದ ಮತದಾರರಿಗೆ ಧನ್ಯವಾದ ಎಂದರು.

ಅಥಣಿಯಲ್ಲಿ ಜಯಭೇರಿ ಭಾರಿಸಿದ ಕಾಂಗ್ರೆಸ್

ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಬಿಜೆಪಿ ಪಕ್ಷದ ಉಪಾಧ್ಯಕ್ಷ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮತ್ತು ಬಿಜೆಪಿ ಪಕ್ಷದಿಂದ ಆಯ್ಕೆಯಾದ ಶಾಸಕ ಮಹೇಶ್ ಕುಮಟಳ್ಳಿ ಇದ್ದರೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇರುವುದರಿಂದ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕೈ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಗಜಾನನ ಮಂಗಸೂಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿ ಪಕ್ಷದ ಉಪಾಧ್ಯಕ್ಷ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಮಾತನಾಡಿ, ಮತದಾರರ ತೀರ್ಪಿಗೆ ನಾವು ತಲೆ ಬಾಗಿಸುತ್ತೇವೆ, ಹೆಚ್ಚಿನ ಸ್ಥಾನ ನಿರೀಕ್ಷೆ ಮಾಡಿದ್ದೆವು. ಆದರೆ 9 ಸ್ಥಾನಗಳಲ್ಲಿ ಜಯ ಸಾಧಿಸಿದ್ದೇವೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಬೆಳಗಾವಿ ಅಧಿವೇಶನದ ಸಮಯದಲ್ಲಿ ಚುನಾವಣೆ ನಡೆದಿದ್ದರಿಂದ ಲಕ್ಷ್ಮಣ್ ಸವದಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅನುಪಸ್ಥಿತಿಯಲ್ಲಿ ನಡೆಯಿತು. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಸೋಲಾಗಿದೆ. ಪುರಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. 2023 ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಪಕ್ಷದ ಉಪಾಧ್ಯಕ್ಷ ಲಕ್ಷ್ಮಣ್ ಸವದಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಈ ಪುರಸಭೆ ಚುನಾವಣೆ ಫಲಿತಾಂಶ ಬಾರಿ ಮುಖಭಂಗ ಉಂಟುಮಾಡಿದೆ.

ಅಥಣಿ ಪುರಸಭೆ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದ ಅಭ್ಯರ್ಥಿಗಳ ಪಟ್ಟಿ:

  • ವಾರ್ಡ್​ 1 ಬಿಜೆಪಿ ಅಭ್ಯರ್ಥಿ - ಬಿಬಿಜಾನ್ ತಾಂಬೋಳಿ
  • ವಾರ್ಡ್ 2 - ಬಿಜೆಪಿ ಅಭ್ಯರ್ಥಿ ಕಲ್ಲೇಶ ಮಡ್ಡಿ
  • ವಾರ್ಡ್ 3 -ಬಿಜೆಪಿ ಅಭ್ಯರ್ಥಿ ಸಂತೋಷ ಸಾವಡಕರ
  • ವಾರ್ಡ್ 4 - ಪಕ್ಷೇತರ ಅಭ್ಯರ್ಥಿ ದತ್ತಾ ವಾಸ್ಟರ್
  • ವಾರ್ಡ್ 5- ಕಾಂಗ್ರೆಸ್ ಅಭ್ಯರ್ಥಿ ಬೀರಪ್ಪ ಯಂಕಂಚಿ
  • ವಾರ್ಡ್6 - ಕಾಂಗ್ರೆಸ್ ಅಭ್ಯರ್ಥಿ ಉದಯ ಸೋಳಸೆ
  • ವಾರ್ಡ್ 7- ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ಅಮಿನ್ ಗದ್ಯಾಳ
  • ವಾರ್ಡ್ 8 - ಪಕ್ಷೇತರ ಅಭ್ಯರ್ಥಿ ದಿಲೀಪ ಲೊಣಾರೆ
  • ವಾರ್ಡ್​ 9- ಬಿಜೆಪಿ ಅಭ್ಯರ್ಥಿ ತಿಪ್ಪಣ್ಣ ಭಜಂತ್ರಿ
  • ವಾರ್ಡ್​ 10 - ಕಾಂಗ್ರೇಸ್ ಅಭ್ಯರ್ಥಿ ರಮೇಶ್ ಪವಾರ
  • ವಾರ್ಡ್​ 11 - ಕಾಂಗ್ರೆಸ್ ಅಭ್ಯರ್ಥಿ ರವಸಾಬ ಐಹೊಳೆ
  • ವಾರ್ಡ್​ 12 - ಬಿಜೆಪಿ ಅಭ್ಯರ್ಥಿ ಬಸವರಾಜ ಪಾಟೀಲ
  • ವಾರ್ಡ್​ 13 - ಪಕ್ಷೇತರ ಅಭ್ಯರ್ಥಿ ಮಲ್ಲೇಶ ಹುದ್ದಾರ
  • ವಾರ್ಡ್ 14 - ಬಿಜೆಪಿ ಅಭ್ಯರ್ಥಿ ಮೃಲಾನಿನಿ. ವಿ. ದೇಶಪಾಂಡೆ
  • ವಾರ್ಡ್ 15 - ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಬಿಳ್ಳೂರ
  • ವಾರ್ಡ್ 16- ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಬೂಟಾಳಿ
  • ವಾರ್ಡ್ 17 - ಕಾಂಗ್ರೆಸ್ ಅಭ್ಯರ್ಥಿ ಶಿವಲಿಲಾ ಬೂಟಾಳಿ
  • ವಾರ್ಡ್ 18- ಕಾಂಗ್ರೆಸ್ ಅಭ್ಯರ್ಥಿ ರುಕ್ಮಮಾ ಬಾಯಿ ಗಡದೆ
  • ವಾರ್ಡ್ 19- ಕಾಂಗ್ರೆಸ್ ಅಭ್ಯರ್ಥಿ ರೀಯಾಜ ಸನದಿ
  • ವಾರ್ಡ್ 20- ಬಿಜೆಪಿ ಅಭ್ಯರ್ಥಿ ರಾಜಶೇಖರ ಗೂಡೋಡಿ
  • ವಾರ್ಡ್ 21- ಕಾಂಗ್ರೆಸ್ ಅಭ್ಯರ್ಥಿ ವಿಲಿನ್ ರಾಜ್ ಎಳಮಲೇ
  • ವಾರ್ಡ್ 22- ಬಿಜೆಪಿ ಅಭ್ಯರ್ಥಿ ವಿದ್ಯಾ ಬುಲಬುಲೆ
  • ವಾರ್ಡ್ 23- ಕಾಂಗ್ರೆಸ್ ಅಭ್ಯರ್ಥಿ ಜುಲೇಖಾಬಿ ಖೇಮಲ್ಪೂರ
  • ವಾರ್ಡ್ 24 - ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಬಿ ಹಳ್ಳಮಳ್ಳ
  • ವಾರ್ಡ್ 25- ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ರವಸಾಬ್ ಐಹೊಳೆ
  • ವಾರ್ಡ್ 26- ಬಿಜೆಪಿ ಅಭ್ಯರ್ಥಿ ಬಸವರಾ ನಾಯಿಕ್
  • ವಾರ್ಡ್ 27- ಕಾಂಗ್ರೆಸ್ ಅಭ್ಯರ್ಥಿ ಸುನೀತಾ ಬಡಕಂಬಿ

ABOUT THE AUTHOR

...view details