ಕರ್ನಾಟಕ

karnataka

ETV Bharat / city

ಅಥಣಿ ತಹಶೀಲ್ದಾರ್​ಗೆ ಮಹಿಳೆಯರಿಂದ ದಿಗ್ಬಂಧನ - Tahsildar Blockade By The Villagers

ಅಥಣಿ ತಹಶೀಲ್ದಾರ್ ದುಂಡಪ್ಪಕುಮಾರ್ ಅವರಿಗೆ ಗ್ರಾಮದ ಮಹಿಳೆಯರು ದಿಗ್ಬಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ..

Athani Tahsildar Blockade By The Villagers
ಅಥಣಿ ತಹಶೀಲ್ದಾರ್​ಗೆ ಮಹಿಳೆಯರಿಂದ ದಿಗ್ಬಂಧನ

By

Published : Mar 25, 2022, 6:57 PM IST

ಅಥಣಿ :ತಾಲೂಕಿನ ತೇಲಸಂಗ ಗ್ರಾಮದಲ್ಲಿ ತಹಶೀಲ್ದಾರ್ ದುಂಡಪ್ಪ ಕುಮಾರ್ ಅವರಿಗೆ ಗ್ರಾಮದ ಮಹಿಳೆಯರು ದಿಗ್ಬಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಮಾದಿಗ ಸಮುದಾಯಕ್ಕೆ ಮೀಸಲಾಗಿದ್ದ 2.15 ಎಕರೆ ಜಮೀನು ಒತ್ತುವರಿಯಾಗಿದೆ. ಅದನ್ನು ಬಿಡಿಸಿ ಕೊಡುವಂತೆ ಕಳೆದ 10 ವರ್ಷಗಳಿಂದ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಮಹಿಳೆಯರು ದಿಗ್ಬಂಧನ ವಿಧಿಸಿದ್ದಾರೆ.

ಅಥಣಿ ತಹಶೀಲ್ದಾರ್​ಗೆ ಮಹಿಳೆಯರಿಂದ ದಿಗ್ಬಂಧನ..

ತೇಲಸಂಗ ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನನ್ನು ಮಾದಿಗ ಸಮುದಾಯಕ್ಕೆ ಸರ್ಕಾರ ಮೀಸಲಿಟ್ಟಿದ್ದು, ಕೆಲವು ಉಳ್ಳವರು ಆ ಜಮೀನನ್ನು ಅತಿಕ್ರಮ ಮಾಡಿಕೊಂಡು ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರರು ಪ್ರತಿಭಟನಾಕಾರರ ಮನವೊಲಿಸಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಇದನ್ನೂ ಓದಿ:37 ವರ್ಷದ ನಂತರ ಸತತ 2ನೇ ಅವಧಿಗೆ ಯುಪಿ ಸಿಎಂ ಆಗಿ ಯೋಗಿ ಆದಿತ್ಯನಾಥ್‌ ಐತಿಹಾಸಿಕ ಪದಗ್ರಹಣ

ABOUT THE AUTHOR

...view details