ಕರ್ನಾಟಕ

karnataka

ETV Bharat / city

ಕರಾಟೆ ಪಂಚ್‌ನಲ್ಲಿ ವಿಶ್ವ ದಾಖಲೆ ಬರೆದ ಅಥಣಿಯ ಬಾಲಕ

ಈ ಬಾಲಕನಿಗೆ ಅಥಣಿಯ ಕರಾಟೆ ತರಬೇತುದಾರ ಮೋಹನ ಸಿಂಗ್ ರಜಪೂತ ಮಾರ್ಗದರ್ಶನ ನೀಡಿದ್ದಾರೆ. ಕೇವಲ ಒಂದು ನಿಮಿಷದಲ್ಲಿ ಈ ಹಿಂದೆ ಮಾಡಿರುವ ದಾಖಲೆಯನ್ನು ಮುರಿದು ವಿಶ್ವ ದಾಖಲೆ ಮಾಡಿರುವುದು ನಮ್ಮೆಲ್ಲರಿಗೆ ಸಂತಸದ ವಿಚಾರ ಎಂದು ತರಬೇತುದಾರ ಮೋಹನ ಸಿಂಗ್ ರಜಪೂರ ಹೇಳಿದರು..

Athani
ಕರಾಟೆ ಪಂಚ್‌ನಲ್ಲಿ ವಿಶ್ವ ದಾಖಲೆ ಬರೆದ ಅಥಣಿಯ ಬಾಲಕ

By

Published : Nov 3, 2021, 10:27 AM IST

Updated : Nov 3, 2021, 12:30 PM IST

ಅಥಣಿ : ಕೇವಲ 60 ಸೆಕೆಂಡ್​​ಗಳಲ್ಲಿ 305 ಕರಾಟೆ ಪಂಚ್​​ಗಳನ್ನು ಮಾಡುವುದರ ಮೂಲಕ 6 ವರ್ಷದ ಬಾಲಕ ಸುಶೀಲ್‌ ಕುಮಾರ್ ವಿವೇಕ ಹೆಗಡೆ ವಿಶ್ವ ದಾಖಲೆ ಮಾಡಿದ್ದಾನೆ.

ಕರಾಟೆ ಪಂಚ್‌ನಲ್ಲಿ ವಿಶ್ವ ದಾಖಲೆ ಬರೆದ ಅಥಣಿಯ ಬಾಲಕ

ಶೊಟೋಕಾನ್ ಕರಾಟೆಯ ರಾಷ್ಟ್ರಾಧ್ಯಕ್ಷ ವಿನೋದ್‌ ಕುಮಾರ್, ಎಕ್ಸ್‌ಲೆಂಟ್ ವರ್ಲ್ಡ್ ರೆಕಾರ್ಡ್​ ಮುಖ್ಯ ನಿರ್ಣಾಯಕ ಅವಿನಾಶ ವಿಶ್ವಕರ್ಮ ಅವರು ಅಥಣಿಗೆ ಆಗಮಿಸಿ ಈ ವಿಶ್ವ ದಾಖಲೆಯನ್ನು ದೃಢಿಕರಿಸಿದ್ದಾರೆ.

ಈ ಹಿಂದೆ 254 ಪಂಚ್ ಮಾಡಿದ್ದ ಗೋವಾದ 35 ವರ್ಷದ ಯುವಕನ ದಾಖಲೆಯನ್ನು ಅಥಣಿಯ 6 ವರ್ಷದ ಪೋರ ಸುಶೀಲ್‌ಕುಮಾರ್ ಹೆಗಡೆ ಮುರಿದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾನೆ. ಈತನ ಅದ್ಭುತ ಸಾಧನೆಗೆ ಅಥಣಿ ಸೇರಿದಂತೆ ಇಡೀ ರಾಜ್ಯದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಾಲಕನಿಗೆ ಅಥಣಿಯ ಕರಾಟೆ ತರಬೇತುದಾರ ಮೋಹನ ಸಿಂಗ್ ರಜಪೂತ ಮಾರ್ಗದರ್ಶನ ನೀಡಿದ್ದಾರೆ. ಕೇವಲ ಒಂದು ನಿಮಿಷದಲ್ಲಿ ಈ ಹಿಂದೆ ಮಾಡಿರುವ ದಾಖಲೆಯನ್ನು ಮುರಿದು ವಿಶ್ವ ದಾಖಲೆ ಮಾಡಿರುವುದು ನಮ್ಮೆಲ್ಲರಿಗೆ ಸಂತಸದ ವಿಚಾರ ಎಂದು ತರಬೇತುದಾರ ಮೋಹನ ಸಿಂಗ್ ರಜಪೂರ ಹೇಳಿದರು.

ಸುಶೀಲ್‌ಕುಮಾರ ವಿವೇಕ ಹೆಗಡೆ ತಾಯಿ ದಿವ್ಯ ಹೆಗಡೆ ಮಾತನಾಡಿ, ಕರಾಟೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದ. ತರಬೇತಿ ಸಮಯದಲ್ಲಿ ಹಲವಾರು ತೊಂದರೆ ಎದುರಾದರೂ ಯಾವುದಕ್ಕೂ ಅಂಜದೆ ನಿರಂತರ ತರಬೇತಿಯಿಂದ ಈ ಸಾಧನೆಗೈದಿದ್ದಾನೆ. ನನ್ನ ಮಗನಿಂದ ಇಂದು ನಾವು ಗುರುತಿಸಿಕೊಳ್ಳುವ ರೀತಿ ಆಗಿದೆ ಎಂದು ಮಗನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Last Updated : Nov 3, 2021, 12:30 PM IST

ABOUT THE AUTHOR

...view details