ಕರ್ನಾಟಕ

karnataka

ETV Bharat / city

ಚಿಕ್ಕೋಡಿಯಲ್ಲಿ ಗಣೇಶ ನಿಮಜ್ಜನ ವೇಳೆ ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಚಾಕು ಇರಿತ! - ಚಾಕುವಿನಿಂದ ಹಲ್ಲೆ

ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಿನ್ನೆ ಗಣೇಶ ನಿಮಜ್ಜನ ಸಮಯದಲ್ಲಿ, ಯಾರೋ ಅಪರಿಚಿತ ವ್ಯಕ್ತಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕುರ್ಲಿ ಗ್ರಾಮದ ಯುವಕ ವಿಶಾಲ ವಿಷ್ಣು ಶೇವಡೆ ಎನ್ನುವವರ ಮೇಲೆ ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ.

assault with knife while ganesh nimajjanam time at chikkodi
ಗಣೇಶ ನಿಮಜ್ಜನ ವೇಳೆ ಹಲ್ಲೆ

By

Published : Sep 22, 2021, 7:27 AM IST

Updated : Sep 22, 2021, 7:34 AM IST

ಚಿಕ್ಕೋಡಿ: ಗಣೇಶ ನಿಮಜ್ಜನ ವೇಳೆ ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಅಪರಿಚಿತರು ಚಾಕುವಿನಿಂದ ಇರಿದ ಘಟನೆ ಸಂಭವಿಸಿದೆ. ತಡರಾತ್ರಿ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಗಣೇಶ ನಿಮಜ್ಜನ ಸಮಯದಲ್ಲಿ ಈ ದುರಂತ ಸಂಭವಿಸಿದೆ.

ಗಣೇಶ ನಿಮಜ್ಜನ ವೇಳೆ ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಚಾಕು ಇರಿತ!

ಹಲ್ಲೆಗೊಳಗಾದ ವಿಶಾಲ ವಿಷ್ಣು ಶೇವಡೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕುರ್ಲಿ ಗ್ರಾಮದ ಯುವಕ ಎಂದು ತಿಳಿದು ಬಂದಿದೆ. ಅಪರಿಚಿತ ವ್ಯಕ್ತಿ ಚಾಕು ಇರಿದು ಪರಾರಿ ಆಗಿದ್ದಾನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಘಟನೆ ನಡೆದಿದೆ. ಗಾಯಾಳುವನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣೇಶ ನಿಮಜ್ಜನ ವೇಳೆ ಡಾಲ್ಬಿ ಡಿಜೆ ಬಳಕೆ ಮಾಡಲಾಗಿತ್ತು. ಡಾಲ್ಬಿ ಡಿಜೆ ನೋಡಲು ಸದಲಗಾ ಪಟ್ಟಣಕ್ಕೆ ವಿಶಾಲ ಆಗಮಿಸಿದ್ದರು. ಈ ವೇಳೆ ದುರಂತ ಸಂಭವಿಸಿದೆ.

ಇದನ್ನೂ ಓದಿ:ಸಿಎಂಗೆ ಬೆದರಿಕೆ ಪ್ರಕರಣ: ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪೊಲೀಸ್ ಕಸ್ಟಡಿಗೆ

ಡಿಜೆ ಬಳಸದಂತೆ ಸರ್ಕಾರದ ಆದೇಶ ಇದ್ದರೂ, ನಿಪ್ಪಾಣಿ ಪಟ್ಟಣದಲ್ಲಿ ಡಿಜೆ ಬಳಕೆ ಮಾಡಿದರೂ ಪೊಲೀಸ್​​ ಇಲಾಖೆ ಸುಮ್ಮನೆ ಕುಳಿತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬಂದಿದೆ. ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಸದಲಗಾ ಪೊಲೀಸ್​​​ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Last Updated : Sep 22, 2021, 7:34 AM IST

ABOUT THE AUTHOR

...view details