ಕರ್ನಾಟಕ

karnataka

ETV Bharat / city

ವಾಹನಕ್ಕಿಂತ ನಿಮ್ಮ ಜೀವ ಮುಖ್ಯ.. ಹೆಲ್ಮೇಟ್‌ ಹಾಕಿಕೊಳ್ಳಿ.. ಸವಾರರಿಗೆ ಎಎಸ್ಐ ಮನವಿ - ವಾಹನ ಸವಾರರು ತಮ್ಮ ಜೀವ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್

ನಿಮಗಾಗಿ ಅಲ್ಲದಿದ್ದರೂ ನಿಮ್ಮ ತಂದೆ-ತಾಯಿ, ಹೆಂಡತಿ ಮಕ್ಕಳಿಗಾದರೂ ವಾಹನಸವಾರರು ರಸ್ತೆ ನಿಯಮಗಳನ್ನು ಪಾಲಿಸಿ, ಪೊಲೀಸ್ ಠಾಣೆಯಲ್ಲಿ ಅತಿ ಹೆಚ್ಚು ಅಪಘಾತ ಪ್ರಕರಣಗಳೇ ದಾಖಲಾಗ್ತವೆ. ಅದರಲ್ಲಿ ಹೆಲ್ಮೇಟ್ ಇಲ್ಲದ ಸವಾರರ ಸಾವಿನ ಸಂಖ್ಯೆಗಳು ಹೆಚ್ಚಾಗಿವೆ. ಅದಕ್ಕಾಗಿ ಹೆಲ್ಮೇಟ್‌ನ ಕಡ್ಡಾಯವಾಗಿ ಬಳಕೆ ಮಾಡಿ ಎಂದು ಹೇಳಿದರು.

KN_CKD_2_raste_suraksha_saptaha_script_KA10023
ಕಾಗವಾಡ ಪೋಲಿಸ್ ಠಾಣೆ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ, ನಿಯಮ ಪಾಲಿಸುವಂತೆ ಎಎಸ್ಐ ಮನವಿ

By

Published : Jan 18, 2020, 3:46 PM IST

ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಉಗಾರ ಬುದ್ರುಕ ಗ್ರಾಮದಲ್ಲಿ 31ನೇಯ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲಾಯ್ತು.

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ, ನಿಯಮ ಪಾಲಿಸುವಂತೆ ಎಎಸ್ಐ ಮನವಿ..
ಕಾಗವಾಡ ಪೊಲೀಸ್ ಠಾಣೆಯ ಎಎಸ್ಐ ಸಾವಂತ ಕುಂಬಾರ ವಾಹನ ಸವಾರರು ಮತ್ತು ಪಾದಚಾರಿಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು. ವಾಹನ ಸವಾರರು ತಮ್ಮ ಜೀವ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ಹಾಗೂ ಲೈಸೆನ್ಸ್, ಇನ್ಸೂರೆನ್ಸ್ ಇತರ ದಾಖಲಾತಿಗಳನ್ನು ಮಾಡಿಸಿಕೊಳ್ಳಬೇಕು. ಕುಡಿದು ವಾಹನ ಚಲಾಯಿಸಬಾರದು, ವಾಹನ ಓವರ್‌ಟೇಕ್ ಮಾಡದಿರೋದು ಸೇರಿ ಇತರೆ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಿದರು.
ನಿಯಮಗಳನ್ನು ಪಾಲಿಸಿದರೆ ಅಪಾಯಗಳು ಕಡಿಮೆಯಾಗುತ್ತವೆ. ಪೊಲೀಸ್ ಇಲಾಖೆಗೆ ಜನರ ಜೀವ ಮಹತ್ವವೇ ಹೊರತು ಬೈಕ್‌ ಅಲ್ಲ.ನಿಮಗಾಗಿ ಅಲ್ಲದಿದ್ದರೂ ನಿಮ್ಮ ತಂದೆ-ತಾಯಿ, ಹೆಂಡತಿ ಮಕ್ಕಳಿಗಾದರೂ ನಾಗರಿಕರೆಲ್ಲರೂ ರಸ್ತೆ ನಿಯಮಗಳನ್ನು ಪಾಲಿಸಿ, ಪೊಲೀಸ್ ಠಾಣೆಯಲ್ಲಿ ಅತಿ ಹೆಚ್ಚು ಅಪಘಾತ ಪ್ರಕರಣಗಳೇ ದಾಖಲಾಗ್ತವೆ. ಅದರಲ್ಲಿ ಹೆಲ್ಮೇಟ್ ಇಲ್ಲದ ಸವಾರರ ಸಾವಿನ ಸಂಖ್ಯೆಗಳು ಹೆಚ್ಚಾಗಿವೆ. ಅದಕ್ಕಾಗಿ ಹೆಲ್ಮೆಟ್‌ನ ಕಡ್ಡಾಯವಾಗಿ ಬಳಕೆ ಮಾಡಿ ಎಂದು ಹೇಳಿದರು.

ABOUT THE AUTHOR

...view details