ಚಿಕ್ಕೋಡಿ: ಶ್ರೀಗಂಧದ ಮರ ಕಡಿಯುತ್ತಿರುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ 3 ಲಕ್ಷ ರೂ.ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ವಶಪಡಿಸಿಕೊಂಡು, ಮೂವರನ್ನು ಬಂಧಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ ಗ್ರಾಮದಲ್ಲಿ ನಡೆದಿದೆ.
ಶ್ರೀಗಂಧದ ಮರ ಕಡಿದು ಸಾಗಿಸುತ್ತಿದ್ದ ನಾಲ್ವರ ಬಂಧನ
ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ ಗ್ರಾಮದ ಮಹಾದೇವ ಸುತಾರ ಎಂಬುವವರ ಮನೆ ಬಳಿಯ ಬಾವಿಯ ದಂಡೆಯ ಮೇಲಿರುವ ಶ್ರೀಗಂಧದ ಮರವನ್ನು ಕಡಿದು ಸುಮಾರು 35 ಕೆ.ಜಿ ಶ್ರೀಗಂಧದ ತುಂಡುಗಳನ್ನು ಮಾರಾಟ ಮಾಡಲು ಆರೋಪಿಗಳು ಕೊಂಡೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಆಪಾದಿತರಿಂದ 3 ಲಕ್ಷ ರೂ. ಮರದ ತುಂಡುಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಜರಳಿ ಗ್ರಾಮದ ಗೋಪಾಳ ತಿಪ್ಪಣ್ಣ ನಾಯಿಕ (38), ಭಗವಾನ ಅಲಿಯಾಸ್ ಪಿಂಟು ಮಹಾದೇವ ನಾಯಿಕ (28) ಮತ್ತು ಶಿಂಧೆವಾಡಿ ಗ್ರಾಮದ ಬಾಳು ಬಾಬುರಾವ್ ಕದಂ (22) ಎಂಬುವವರೇ ಬಂಧಿತ ಆರೋಪಿಗಳು.
ಪಟ್ಟಣಕುಡಿ ಗ್ರಾಮದ ಮಹಾದೇವ ಸುತಾರ ಎಂಬುವವರ ಮನೆ ಸಮೀಪದ ಬಾವಿಯ ದಂಡೆಯ ಮೇಲಿರುವ ಶ್ರೀಗಂಧದ ಮರವನ್ನು ಕಡಿದು ಸುಮಾರು 35 ಕೆ.ಜಿ ಶ್ರೀಗಂಧದ ತುಂಡುಗಳನ್ನು ಮಾರಾಟ ಮಾಡಲು ಕೊಂಡೊಯ್ಯಲಾಗುತ್ತಿತ್ತು. ಈ ವೇಳೆಖಡಕಲಾಟ ಪೊಲೀಸ್ ಠಾಣೆಯ ಎಸ್ಪಿ ಮಿಥುನ್ ಕುಮಾರ್ ಮತ್ತು ಸಿಪಿಐ ಸಂತೋಷ್ ಸತ್ಯನಾಯಿಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.