ಕರ್ನಾಟಕ

karnataka

ETV Bharat / city

ರಾಯಣ್ಣ ಪ್ರತಿಮೆ ಭಗ್ನಗೊಳಿಸಿದವರ ವಿರುದ್ಧ ಕಠಿಣ ಕ್ರಮ: ಸಚಿವ ಆರಗ ಜ್ಞಾನೇಂದ್ರ - ರಾಯಣ್ಣ ಶಿವಾಜಿ ಪ್ರತಿಮೆ ಧ್ವಂಸ

ಗಡಿ ಜಿಲ್ಲೆಯಲ್ಲಿ ಕನ್ನಡ ಹಾಗೂ ಮರಾಠಿ ಮಾತನಾಡುವ ಜನತೆ ಅತ್ಯಂತ ಅನ್ಯೋನ್ಯತೆ, ಪ್ರೀತಿ ಹಾಗೂ ಸಾಮರಸ್ಯದಿಂದ ಇದ್ದಾರೆ. ರಾಯಣ್ಣ ಹಾಗೂ ಶಿವಾಜಿಯವರಂಥ ಮಹನೀಯರ ಬಗ್ಗೆ ಎಳ್ಳಷ್ಟೂ ಗೌರವವಿಲ್ಲದ ದುಷ್ಕರ್ಮಿಗಳ ಉದ್ದೇಶ, ಸಮಾಜದಲ್ಲಿನ ನೆಮ್ಮದಿಗೆ ಭಂಗ ತರುವುದಾಗಿದ್ದು, ಅವರನ್ನು ಬಗ್ಗು ಬಡಿಯಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಖಡಕ್​ ಎಚ್ಚರಿಕೆ ನೀಡಿದ್ದಾರೆ.

araga-jnanendra
ಆರಗ ಜ್ಞಾನೇಂದ್ರ

By

Published : Dec 19, 2021, 12:42 PM IST

ಬೆಳಗಾವಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಭಗ್ನಗೊಳಿಸಿ, ಪುಂಡಾಟಿಕೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಖಡಕ್​ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಗಡಿ ಜಿಲ್ಲೆಯಲ್ಲಿ ಕನ್ನಡ ಹಾಗೂ ಮರಾಠಿ ಮಾತನಾಡುವ ಜನತೆ ಅತ್ಯಂತ ಅನ್ಯೋನ್ಯತೆ, ಪ್ರೀತಿ ಹಾಗೂ ಸಾಮರಸ್ಯದಿಂದ ಇದ್ದಾರೆ. ರಾಯಣ್ಣ ಹಾಗೂ ಶಿವಾಜಿಯವರಂಥ ಮಹನೀಯರ ಬಗ್ಗೆ ಎಳ್ಳಷ್ಟೂ ಗೌರವವಿಲ್ಲದ ದುಷ್ಕರ್ಮಿಗಳ ಉದ್ದೇಶ, ಸಮಾಜದಲ್ಲಿನ ನೆಮ್ಮದಿಗೆ ಭಂಗ ತರುವುದಾಗಿದ್ದು, ಅವರನ್ನು ಬಗ್ಗು ಬಡಿಯಲಾಗುವುದು ಎಂದಿದ್ದಾರೆ.

Home minister Araga Jnanendra reaction on Belagavi riot: ಬೆಳಗಾವಿ ಹಾಗೂ ಬೆಂಗಳೂರಿನ ಘಟನೆಗಳ ಬಗ್ಗೆ, ಸಂಬಂಧಿಸಿದ ಪೊಲೀಸ್ ಹಾಗೂ ಇತರ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ. ಶಾಂತಿ ಹಾಗೂ ಸುವ್ಯವಸ್ತೆ ಕಾಪಾಡಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು, ತೆಗೆದುಕೊಳ್ಳಲು ನಿರ್ದೇಶಿಸಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ಬೆಳಗಾವಿ ಅಧಿವೇಶನ ಆರಂಭವಾದ ದಿನದಿಂದಲೂ ಎಂಇಎಸ್ ಉದ್ಧಟತನ ಮೆರೆಯುತ್ತಿದ್ದು, ಇದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಹೋರಾಟಕ್ಕಿಳಿದಿವೆ. ಸಂಘಟನೆಗಳ ಹೋರಾಟದಿಂದಾಗಿ ಕುಂದಾನಗರಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಪೊಲೀಸರು ಹರಸಾಹಸ ನಡೆಸಿದ್ದಾರೆ.

ಇಂದು ಸಹ ನಗರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿವೆ. ನಾಳೆ ಸಹ ಬೆಳಗಾವಿ ಸುವರ್ಣ ವಿಧಾನಸೌಧ ಪ್ರತಿಭಟನಾ ಮೆರವಣಿಗೆ ಕೈಗೊಳ್ಳಲು ತೀರ್ಮಾನಿಸಿವೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗೃಹ ಸಚಿವರು ಪೊಲೀಸ್ ಇಲಾಖೆಗೆ ವಿವಿಧ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ABOUT THE AUTHOR

...view details