ಕರ್ನಾಟಕ

karnataka

ETV Bharat / city

ಕೊರೊನಾಗೆ ಬೆಳಗಾವಿಯಲ್ಲಿ ಮತ್ತೊಂದು ಬಲಿ: ಮೃತರ ಸಂಖ್ಯೆ 4ಕ್ಕೆ ಏರಿಕೆ - Belgaum corona case

ಬೆಳಗಾವಿ ಜಿಲ್ಲೆಯಲ್ಲಿಂದು ಕೊರೊನಾಕ್ಕೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ತೀವ್ರ ‌ಉಸಿರಾಟದ ತೊಂದರೆ ಹಾಗೂ ಜ್ವರದಿಂದ ಬಳಲುತ್ತಿದ್ದ ಅಥಣಿ ಮೂಲದ 45 ವರ್ಷದ (P-16964) ವ್ಯಕ್ತಿ ಸಾವನ್ನಪ್ಪಿದ್ದಾರೆ.

Another death in Belgaum for Corona
ಕೊರೊನಾಗೆ ಬೆಳಗಾವಿಯಲ್ಲಿ ಮತ್ತೊಂದು ಬಲಿ..ಮೃತರ ಸಂಖ್ಯೆ 4ಕ್ಕೆ ಏರಿಕೆ

By

Published : Jul 2, 2020, 8:30 PM IST

ಬೆಳಗಾವಿ: ಜಿಲ್ಲೆಯಲ್ಲಿಂದು ಕೊರೊನಾಕ್ಕೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಮೃತರ ಸಂಖ್ಯೆ ‌4ಕ್ಕೆ ಏರಿಕೆಯಾಗಿದೆ.

ತೀವ್ರ ‌ಉಸಿರಾಟದ ತೊಂದರೆ ಹಾಗೂ ಜ್ವರದಿಂದ ಬಳಲುತ್ತಿದ್ದ ಅಥಣಿ ಮೂಲದ 45 ವರ್ಷದ (P-16964) ವ್ಯಕ್ತಿ ಮೃತಪಟ್ಟಿದ್ದು, ಈತನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೃತನ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲಾಗುತ್ತಿದೆ. ಜಿಲ್ಲೆಯಲ್ಲಿಂದು 8 ವರ್ಷದ ಬಾಲಕಿ, ಕೆಎಸ್​ಆರ್​ಪಿ ಕಾನ್ಸ್​ಟೇಬಲ್ ಸೇರಿ 7 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 343ಕ್ಕೆ ಏರಿಕೆಯಾಗಿದೆ.

ಕೇರಳದಿಂದ ಜಿಲ್ಲೆಗೆ ಮರಳಿದ್ದ 27 ವರ್ಷದ ಯುವಕ (P-16960), ಗುಜರಾತ್‌ನಿಂದ ಜಿಲ್ಲೆಗೆ ಮರಳಿದ್ದ 54 ವರ್ಷದ ಪುರುಷ (P-16962), ಮಹಾರಾಷ್ಟ್ರದಿಂದ ಮರಳಿದ್ದ 35 ವರ್ಷದ ಪುರುಷ (P-16961) ಹಾಗೂ 52 ವರ್ಷದ ಪುರುಷನಿಗೆ (P-16963) ಕೊರೊನಾ ಸೋಂಕು ದೃಢಪಟ್ಟಿದೆ.

ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೆ ಇಬ್ಬರಿಗೆ ಸೋಂಕು ತಗುಲಿದೆ. ಗೋಕಾಕ್‌ನ ಆದಿ ಜಾಂಭವ ನಗರ ನಿವಾಸಿ 8 ವರ್ಷದ ಬಾಲಕಿ (P-17022) ಹಾಗೂ 46 ವರ್ಷದ ಕೆಎಸ್​ಆರ್​​ಪಿ ಕಾನ್ಸ್​ಟೇಬಲ್ (P-17021)ಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸೋಂಕು ತಗುಲಿರುವ ಪೊಲೀಸ್ ಕಾನ್ಸ್​ಟೇಬಲ್​ ನಿಪ್ಪಾಣಿ ಸಮೀಪದ ಕುಗನೊಳ್ಳಿ ಚೆಕ್ ​ಪೋಸ್ಟ್ ಬಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು ಎನ್ನಲಾಗುತ್ತಿದೆ.

ABOUT THE AUTHOR

...view details