ಚಿಕ್ಕೋಡಿ:ದೇಶದಲ್ಲಿ ಒಮಿಕ್ರೋನ್ ಕೊರೊನಾ ರೂಪಾಂತರಿ ಹೊಸ ತಳಿಯ ಆತಂಕ ಹಿನ್ನೆಲೆ ಬೆಳಗಾವಿ ಮಹಾರಾಷ್ಟ್ರ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಾಯ್ತನದ ಜವಾಬ್ದಾರಿ ಜತೆಗೆ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಚಿಕ್ಕೋಡಿ: ತಾಯ್ತನದ ಜವಾಬ್ದಾರಿ ಜತೆಗೆ ಕರ್ತವ್ಯ ಪ್ರಜ್ಞೆ ಮೆರೆದ ಅಂಗನವಾಡಿ ಕಾರ್ಯಕರ್ತೆ - High alert in Belgavi, Maharashtra border
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಶಾಹಿನ್ ಮುಜಾವರ್ ಎಂಬ ಅಂಗನವಾಡಿ ಕಾರ್ಯಕರ್ತೆ ಪುಟ್ಟ ಕಂದಮ್ಮನನ್ನು ಹಿಡಿದು ಚೆಕ್ ಪೋಸ್ಟ್ನಲ್ಲಿ ಕೋವಿಡ್ ತಪಾಸಣೆ ಮಾಡಿ ತಾಯ್ತನದ ಜತೆಗೆ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
![ಚಿಕ್ಕೋಡಿ: ತಾಯ್ತನದ ಜವಾಬ್ದಾರಿ ಜತೆಗೆ ಕರ್ತವ್ಯ ಪ್ರಜ್ಞೆ ಮೆರೆದ ಅಂಗನವಾಡಿ ಕಾರ್ಯಕರ್ತೆ Anganwadi activist Covid test in check post with her baby](https://etvbharatimages.akamaized.net/etvbharat/prod-images/768-512-13764898-thumbnail-3x2-news.jpg)
ಪುಟ್ಟ ಕಂದಮ್ಮನನ್ನು ಹಿಡಿದು ಚೆಕ್ಪೋಸ್ಟ್ ನಲ್ಲಿ ಕೋವಿಡ್ ತಪಾಸಣೆ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆ
ಪುಟ್ಟ ಕಂದಮ್ಮನನ್ನು ಹಿಡಿದು ಚೆಕ್ಪೋಸ್ಟ್ ನಲ್ಲಿ ಕೋವಿಡ್ ತಪಾಸಣೆ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಶಾಹಿನ್ ಮುಜಾವರ್ ಎಂಬ ಅಂಗನವಾಡಿ ಕಾರ್ಯಕರ್ತೆ ತನ್ನ 2 ವರ್ಷದ ಮಗುವನ್ನು ಹೊತ್ತು ಚೆಕ್ಪೋಸ್ಟ್ ನಲ್ಲಿ ಕೋವಿಡ್ ತಪಾಸಣೆ ಮಾಡುತ್ತಿದ್ದರು. ವಿಷಯ ತಿಳಿದು ಕಾಗವಾಡ ಸಿಡಿಪಿಒ ಸಂಜಯ್ ಕುಮಾರ್ ಸದಲಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಎರಡು ವರ್ಷದ ಮಗುವಿನ ಆರೋಗ್ಯ, ಕೋವಿಡ್ ಆತಂಕ ಹಿನ್ನೆಲೆ ಅಂಗನವಾಡಿ ಕಾರ್ಯಕರ್ತೆ ಶಾಹಿನ್ ಮುಜಾವರ್ ಎಂಬುವವರನ್ನು ರಿಲೀವ್ ಮಾಡಿ ಅವರು ಆದೇಶಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರಪತಿ ಭದ್ರತಾ ಬೆಂಗಾವಲು ಪಡೆಯಲ್ಲಿರಬೇಕಿದ್ದ 2 ಪೊಲೀಸ್ ಸೇರಿ 7 ಅಧಿಕಾರಿಗಳಿಗೆ ಕೋವಿಡ್