ಬೆಳಗಾವಿ: 2020 ಹಾಗೂ 2021 ಅಕ್ಷಯ ತೃತೀಯ ವೇಳೆ ಕೋವಿಡ್ ವ್ಯಾಪಕವಾಗಿ ಹರಡಿತ್ತು. ಕೋವಿಡ್ ನಿಯಂತ್ರಣಕ್ಕೆ 2020ರಲ್ಲಿ ಕೇಂದ್ರ ಸರ್ಕಾರ ಲಾಕ್‍ಡೌನ್ ಮಾಡಿದ್ರೆ 2021ಕ್ಕೆ ರಾಜ್ಯ ಸರ್ಕಾರ ಲಾಕ್‍ಡೌನ್ ಹೇರಿತ್ತು. ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನಜೀವನ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮಂಗಳವಾರ ಅಕ್ಷಯ ತೃತೀಯಕ್ಕೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನೂರಾರು ಕೋಟಿ ಚಿನ್ನಾಭರಣದ ವ್ಯಾಪಾರವಾಗುವ ನಿರೀಕ್ಷೆಯನ್ನು ವ್ಯಾಪಾರಿಗಳು.
ಈ ಹಿಂದಿನ ಎರಡೂ ವರ್ಷ ಅಕ್ಷಯ ತೃತೀಯ ದಿನ ಚಿನ್ನದ ವ್ಯಾಪಾರ ಆಗಿರಲಿಲ್ಲ. ಇದೀಗ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು, ಎಲ್ಲ ಕ್ಷೇತ್ರಗಳಲ್ಲಿ ಚೇತರಿಕೆ ಕಾಣುತ್ತಿದೆ. ಹೀಗಾಗಿ ಈ ಬಾರಿಯ ಅಕ್ಷಯ ತೃತೀಯ ವೇಳೆ ದಾಖಲೆ ಪ್ರಮಾಣದಲ್ಲಿ ಚಿನ್ನಾಭರಣಗಳ ವ್ಯಾಪಾರ-ವಹಿವಾಟು ನಡೆಯುವ ನಿರೀಕ್ಷೆಯಲ್ಲಿ ಜಿಲ್ಲೆಯ ಚಿನ್ನಾಭರಣ ಮಳಿಗೆ ವ್ಯಾಪಾರಿಗಳು ಹೊಂದಿದ್ದಾರೆ.
ಅಕ್ಷಯ ತೃತೀಯಕ್ಕೆ ಬಂಪರ್:ದೇಶ-ವಿದೇಶಗಳಲ್ಲಿ ಮಳಿಗೆ ಹೊಂದಿರುವ ದೊಡ್ಡ ದೊಡ್ಡ ಜ್ಯುವಲ್ಲರಿ ಶಾಪ್‍ಗಳು ಗ್ರಾಹಕರನ್ನು ಸೆಳೆಯಲು ಚಿನ್ನದ ಮೇಲೆ ಆಫರ್ ಇಟ್ಟಿದ್ದಾರೆ. ಚಿನ್ನ ಖರೀದಿಸಿದರೆ ವೇಸ್ಟೇಜ್, ಮೇಕಿಂಗ್‍ನಲ್ಲಿ ರಿಯಾಯಿತಿ ಘೋಷಿಸಿವೆ. ಮಲಬಾರ್, ಕಲ್ಯಾಣ್, ಜೊಯಾಲುಕಾಸ್, ತನಿಷ್ಕ ಸೇರಿದಂತೆ ಹಲವು ಬೃಹತ್ ಚಿನ್ನದ ಮಳಿಗಳಲ್ಲಿ ಈಗಾಗಲೇ ಅಕ್ಷಯ ತೃತೀಯ ನಿಮಿತ್ತ ಆಫರ್ಗಳು ಕೈಬೀಸಿ ಕರೆಯುತ್ತಿವೆ. ಚಿನ್ನದ ಜೊತೆಗೆ ಇತರ ಗಿಫ್ಟ್ಗಳನ್ನು ನೀಡಲಾಗುತ್ತಿದೆ. ಸಣ್ಣ-ಪುಟ್ಟ ಚಿನ್ನದ ಮಳಿಗೆಯ ಮಾಲೀಕರು ಕೂಡ ಆಫರ್ ನೀಡಲು ಹಿಂದೇಟು ಹಾಕಿಲ್ಲ. ಅವರೂ ದೊಡ್ಡ ಮಳಿಗೆಗಳಿಗೆ ಸಮಾನವಾಗಿ ಆಫರ್ಗಳನ್ನು ಘೋಷಿಸುತ್ತಿದ್ದಾರೆ.