ಕರ್ನಾಟಕ

karnataka

ETV Bharat / city

ಮಹಾರಾಷ್ಟ್ರದಲ್ಲಿ ಮತ್ತೆ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು: ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ - ಶಿವಸೇನೆ ಹಾಗೂ ಎಂಇಎಸ್​ ಕಾರ್ಯಕರ್ತರ ದುಂಡಾವರ್ತನೆ

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮೀರಜ್‌ನ ಮಹಾರಾಣಾ ಪ್ರತಾಪ್ ಚೌಕ್‌‌ನಲ್ಲಿ ಶಿವಸೇನೆ ಕಿಡಿಗೇಡಿಗಳು ಮತ್ತೆ ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಉದ್ಧಟತನ ಪ್ರದರ್ಶನ ಮಾಡಿದ್ದಾರೆ.

ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

By

Published : Dec 22, 2021, 10:42 AM IST

Updated : Dec 22, 2021, 1:30 PM IST

ಬೆಳಗಾವಿ: ಮಹಾರಾಷ್ಟ್ರದಲ್ಲಿ ಮತ್ತೆ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿಯಿಟ್ಟು ಕರ್ನಾಟಕ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ದುಂಡಾವರ್ತನೆ ಪ್ರದರ್ಶನ ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಮಹಾರಾಷ್ಟ್ರ ಸರ್ಕಾರವೇ, ಕಿಡಿಗೇಡಿಗಳಿಗೆ ಕುಮ್ಮಕ್ಕು ಕೊಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಿ‌ನಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಖಂಡಿಸಿ ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಎಂಇಎಸ್​ ಕಾರ್ಯಕರ್ತರ ದುಂಡಾವರ್ತನೆ ಮಿತಿಮೀರಿದೆ. ಸಾಂಗಲಿ ಜಿಲ್ಲೆಯ ಮಿರಜ್‌ನ ಮಹಾರಾಣಾ ಪ್ರತಾಪ್ ಚೌಕ್‌‌ನಲ್ಲಿ ಶಿವಸೇನೆ ಕಿಡಿಗೇಡಿಗಳು ಮತ್ತೆ ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಉದ್ಧಟತನ ಪ್ರದರ್ಶನ ಮಾಡಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್

ಇದಲ್ಲದೇ ಕರ್ನಾಟಕ -ಮಹಾರಾಷ್ಟ್ರ ಗಡಿಗೆ ನುಗ್ಗಿ‌ ಪ್ರತಿಭಟನೆ ನಡೆಸ್ತೇವೆ‌ ಎಂದು ಮೀರಜ್ ಶಿವಸೇನೆ ಕಾರ್ಯಕರ್ತ ಚಂದ್ರಕಾಂತ ಮೈನಗುರೆ ಉದ್ಧಟತನದ ಹೇಳಿಕೆ ನೀಡಿದ್ದಾನೆ.

ಓದಿ:ಬೆಳಗಾವಿಯಲ್ಲಿ ಪೊಲೀಸ್​ ವಾಹನಕ್ಕೆ ಕಲ್ಲು ತೂರಿದ 27 ಮಂದಿ ಕಿಡಿಗೇಡಿಗಳು ಅರೆಸ್ಟ್​.. ಶಿವಾಜಿ ಪುತ್ಥಳಿಗೆ ಕ್ಷೀರಾಭಿಷೇಕ

ಇಂದು ಶಿವಸೇನೆ ಸದಸ್ಯರು ಕಾಗವಾಡ ಗಡಿಯಲ್ಲಿ ಬಂದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

Last Updated : Dec 22, 2021, 1:30 PM IST

ABOUT THE AUTHOR

...view details