ಅಥಣಿ: ವಿಜಯಪುರದಲ್ಲಿ ಕೊರೊನಾ ಪೀಡಿತರು ಪತ್ತೆಯಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗಡಿಭಾಗದ ತೆಲಸಂಗ ಕ್ರಾಸ್ ಬಳಿ ಕಟ್ಟುನಿಟ್ಟಿನ ತಪಾಸಣೆಗಾಗಿ ಚೆಕ್ಪೋಸ್ಟ್ನಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ.
ಅನಗತ್ಯ ಓಡಾಟಕ್ಕೆ ಬ್ರೇಕ್: ಚೆಕ್‌ಪೋಸ್ಟ್ ಬಳಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ
ಅನಿವಾರ್ಯವಿದ್ದಾಗ ಮಾತ್ರ ಸಂಚರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರದಿಂದಿರಿ. ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಚೆಕ್ಪೋಸ್ಟ್ನಲ್ಲಿ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಹೀಗಾಗಿ ಜನರ ಸಹಕಾರ ನೀಡಬೇಕು ಎಂದು ಗ್ರಾಮಲೆಕ್ಕಾಧಿಕಾರಿ ಹೇಳಿದ್ದಾರೆ.
ತಪಾಸಣೆ
ಅಥಣಿ ತಾಲೂಕಿನ ಗಡಿಯಿಂದ 43 ಕಿ.ಮೀ ದೂರವಿರುವ ವಿಜಯಪುರದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಂತೆ ಮತ್ತಷ್ಟು ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜಿಸಿ ಬೇಕಾಬಿಟ್ಟಿ ಓಡಾಡುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಗ್ರಾಮ ಲೆಕ್ಕಾಧಿಕಾರಿ ಕಲ್ಲೇಶ ಕನಮಡಿ ಮಾತನಾಡಿ, ವಿವಿಧ ಸಬೂಬು ಹೇಳಿಕೊಂಡು ಜನ ವಾಹನಗಳಲ್ಲಿ ಬರುತ್ತಿದ್ದಾರೆ. ಅನಾವಶ್ಯಕವಾಗಿ ಜನ ಓಡಾಡಬಾರದು. ಲಾಕ್‌ಡೌನ್ ಪಾಲನೆ ಮಾಡಿದಷ್ಟು ಹೆಚ್ಚು ಅನುಕೂಲ ಮತ್ತು ಕೊರೊನಾದಿಂದ ಪಾರಾಗಲು ಇರುವುದು ಇದೊಂದೇ ಮಾರ್ಗ ಎಂದರು.