ಕರ್ನಾಟಕ

karnataka

ETV Bharat / city

MES ಪುಂಡಾಟಿಕೆ: ಮಹಾರಾಷ್ಟ್ರ ನಕಾಶೆಯಲ್ಲಿ ಬೆಳಗಾವಿ ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್

ಕೈಗೆ ಕಪ್ಪು ಪಟ್ಟಿ ಕಟ್ಟಿ ಸಭೆ, ಸಮಾರಂಭಗಳಿಗೆ ಹಾಜರಾಗಲು ಮಹಾರಾಷ್ಟ್ರ ಸಚಿವರು ನಿರ್ಧರಿಸಿದ್ದಾರೆ. ಈ ಸಂಬಂಧ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಏಕನಾಥ ಶಿಂಧೆ ಭರವಸೆ ನೀಡಿದ್ದಾರೆಂದು ಎಂಇಎಸ್ ಯುವ ಸಮಿತಿ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದೆ..

Add Belagavi on Maharashtra Map posted on social media
ಮಹಾರಾಷ್ಟ್ರ ನಕಾಶೆಯಲ್ಲಿ ಬೆಳಗಾವಿ ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್

By

Published : Nov 1, 2021, 1:50 PM IST

ಬೆಳಗಾವಿ :ಒಂದಿಲ್ಲೊಂದು ರೀತಿಯಲ್ಲಿ ‌ಗಡಿ ತಂಟೆ ತೆಗೆಯುವ ನಾಡದ್ರೋಹಿ ಎಂಇಎಸ್ ಪುಂಡರು ಇಂದೊಂದು ಹೆಜ್ಜೆ ಮುಂದಿಟ್ಟು ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ರಾಜ್ಯೋತ್ಸವ ಸಂಭ್ರಮದಲ್ಲಿರುವ ಕರುನಾಡಿನ‌ ಜನರನ್ನು ಎಂಇಎಸ್ ಪುಂಡರು ಕೆರಳಿಸಿದ್ದಾರೆ.

ಮಹಾರಾಷ್ಟ್ರ ನಕಾಶೆಯಲ್ಲಿ ಬೆಳಗಾವಿ ಸೇರಿದಂತೆ ಗಡಿಭಾಗದ ಜಿಲ್ಲೆಗಳನ್ನು ಸೇರಿಸಿ ಉದ್ಧಟತನ ಪ್ರದರ್ಶಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದ ನಕಾಶೆಯಲ್ಲಿ ಕರ್ನಾಟಕದ ಗಡಿ ಭಾಗ ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಎಂಇಎಸ್‌ಗೆ ಮಹಾರಾಷ್ಟ್ರ ಸರ್ಕಾರ ಬೆಂಬಲಿಸಿದೆ. ಇಂದು ಎಂಇಎಸ್ ಪ್ರತಿಭಟನೆಗೆ ಮಹಾರಾಷ್ಟ್ರ ಸಚಿವರು‌ ನಿರ್ಧರಿಸಿದ್ದು, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸಭೆ-ಸಮಾರಂಭಗಳಿಗೆ ಹಾಜರಾಗಲು ತಿಳಿಸಿದ್ದಾರೆ ಎನ್ನಲಾಗ್ತಿದೆ.

ಈ ಸಂಬಂಧ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಏಕನಾಥ ಶಿಂಧೆ ಭರವಸೆ ನೀಡಿದ್ದಾರೆಂದು ಎಂಇಎಸ್ ಯುವ ಸಮಿತಿ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದೆ.

ಪದೇಪದೆ ಉದ್ಧಟತನ ಮೆರೆಯುತ್ತಿರುವ ನಾಡದ್ರೋಹಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

ಇದನ್ನೂ ಓದಿ:MES ಪುಂಡರಿಗೆ ಬೆಳಗಾವಿ ಪೊಲೀಸರ ಮೂಗುದಾರ.. ಧರಣಿಗಷ್ಟೇ ಸೀಮಿತವಾದ 'ಕರಾಳ ದಿನ'..

ABOUT THE AUTHOR

...view details