ಬೆಳಗಾವಿ:ಬಿಜೆಪಿ ಮೆರವಣಿಗೆ ತಡೆಯಲು ಯತ್ನಿಸಿದ ಮಾರ್ಕೆಟ್ ಎಸಿಪಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತರಾಟೆ ತೆಗೆದುಕೊಂಡ ಘಟನೆ ನಗರದ ಡಿಸಿ ಕಚೇರಿ ಎದುರು ನಡೆಯಿತು.
ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಇಲ್ಲಿನ ಸಾಹಿತ್ಯ ಭವನದಿಂದ ಡಿಸಿ ಕಚೇರಿಯವರೆಗೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಮಾರ್ಗಮಧ್ಯದಲ್ಲಿ ಮೆರವಣಿಗೆ ತಡೆಯಲು ಬಂದ ಎಸಿಪಿಗೆ ರಮೇಶ್ ಜಾರಕಿಹೊಳಿ ತರಾಟೆ ತೆಗೆದುಕೊಂಡರು.