ಬೆಳಗಾವಿ :ಕೊಲೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿ 15 ಲಕ್ಷ ರೂಪಾಯಿ ಪಡೆದ ಹಾಗೂ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆ ಗೋಕಾಕ್ ಸಿಪಿಐ ಹಾಗೂ ಪಿಎಸ್‍ಐ ವಿರುದ್ಧ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ಸಂಬಂಧ ಠಾಣೆಯ ಪಿಎಸ್ಐ ನಾಗರಾಜ್ ಕಿಲ್ಲಾರಿ ಅವರನ್ನು ಹೆಚ್ಚುವರಿ ಎಸ್ಪಿ ಮಹಾನಿಂಗ್ ನಂದಗಾವಿ ಅವರು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಸಿಪಿಐ ಗೋಪಾಲ್ ರಾಠೋಡ್, ಪೇದೆಗಳಾದ ಕಸ್ತೂರಿ, ಪಾಟೀಲ್ ವಿಚಾರಣೆಗೆ ಗೈರಾಗಿದ್ದಾರೆ ಎಂದು ತಿಳಿದು ಬಂದಿದೆ.
ಗೋಕಾಕ್‌ನ ಮಹಾಂತೇಶ ನಗರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿ 15 ಲಕ್ಷ ಲಂಚ ಪಡೆದಿರುವ ಆರೋಪದ ಹಿನ್ನೆಲೆ ಗೋಕಾಕ್ ಸಿಪಿಐ ಗೋಪಾಲ್ ರಾಠೋಡ್ ಅವರ ವಿರುದ್ಧ ಸಮಗ್ರ ತನಿಖೆಗೆ ಆಗ್ರಹಿಸಿ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶ ಹೊರಡಿಸಿದ್ದರು.