ಕರ್ನಾಟಕ

karnataka

ETV Bharat / city

ಭೀಕರ ರಸ್ತೆ ಅಪಘಾತ; ಲಾರಿ ಮೈಮೇಲೆ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು - A terrible road accident, A bike rider dies on the spot

ಲಾರಿಯೊಂದು ಬೈಕ್ ನ್ನು ಓವರ್​ಟೇಕ್ ಮಾಡಲು ಹೋಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೋಳೆ ಗ್ರಾಮದ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಐನಾಪುರ ಗ್ರಾಮದ ಸಿದ್ದಪ್ಪ ಹೂಗಾರ ಎಂದು ಗುರುತಿಸಲಾಗಿದೆ.

a-terrible-road-accident-a-bike-rider-dies-on-the-spot
ಭೀಕರ ರಸ್ತೆ ಅಪಘಾತ; ಲಾರಿ ಮೈಮೇಲೆ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು

By

Published : Apr 21, 2022, 9:19 AM IST

ಚಿಕ್ಕೋಡಿ(ಬೆಳಗಾವಿ): ಲಾರಿಯೊಂದು ಬೈಕ್ ನ್ನು ಓವರ್ ಟೇಕ್ ಮಾಡಲು ಹೋಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೋಳೆ ಗ್ರಾಮದ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಐನಾಪುರ ಗ್ರಾಮದ ಸಿದ್ದಪ್ಪ ಹೂಗಾರ(49) ಎಂದು ಗುರುತಿಸಲಾಗಿದೆ.

ಬೈಕ್ ಸವಾರ ಮಹಾವೀರ ಅವರು ಮೋಳೆಯಿಂದ - ಐನಾಪೂರ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಟ್ರಕ್ಕೊಂದು ಓವರ್ ಟೇಕ್ ಮಾಡುವಾಗ ಬೈಕ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ವೇಳೆ ಟ್ರಕ್ ಬೈಕ್ ಸವಾರನ ಮೈಮೇಲೆ ಹರಿದಿದ್ದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ದೇಹ ಛಿದ್ರ ಛಿದ್ರವಾಗಿದೆ. ಘಟನಾ ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಓದಿ :ಕಲಬುರಗಿ ಭೂಸ್ವಾಧೀನ ಕಚೇರಿ ಮೇಲೆ ಎಸಿಬಿ ದಾಳಿ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯವಸ್ಥಾಪಕ

For All Latest Updates

TAGGED:

ABOUT THE AUTHOR

...view details