ಬೆಳಗಾವಿ:ಓದಿದ್ದು ಆಗುತ್ತಿಲ್ಲವೆಂದು ನೊಂದು ಎಸ್ಎಸ್ಎಲ್ಸಿ ವಿದ್ಯಾರ್ಥಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾರ್ಕಂಡೇಯ ನಗರದಲ್ಲಿ ನಡೆದಿದೆ.
ಓದಿದ್ದು ಅರ್ಥವಾಗದೆ ಮನನೊಂದು ಆತ್ಮಹತ್ಯೆಗೆ ಶರಣಾದ sslc ವಿದ್ಯಾರ್ಥಿ - belagavi news
ಓದಿದ್ದು ಅರ್ಥ ಆಗದಿದಕ್ಕೆ ನೊಂದು ಎಸ್ಎಸ್ಎಲ್ಸಿ ವಿದ್ಯಾರ್ಥಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿ ನಡೆದಿದೆ.
ಓದಿದ್ದು ಮನವರಿಕೆ ಆಗದಿದ್ದಕ್ಕೆ ನೊಂದು ಆತ್ಮಹತ್ಯೆಗೆ ಶರಣಾದ sslc ವಿದ್ಯಾರ್ಥಿ
ಯುವರಾಜ ಬಾಗಿಲೇಕರ್(16) ಮೃತ. ಯುವರಾಜ್ ಮೂಲತಃ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿ. ಈತ ಮಾರ್ಕಂಡೇಯ ನಗರದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಸ್ಥಳೀಯ ಪ್ರೌಡಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ಥಿಯು ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.