ಬೆಳಗಾವಿ:ಯಾವುದೋ ಕಾರಣಕ್ಕೆಸಹೋದರರಮಧ್ಯೆ ನಡೆದ ಗಲಾಟೆಯಲ್ಲಿ ಒಡಹುಟ್ಟಿದ ತಮ್ಮನನ್ನೇ ಚಾಕುವಿನಿಂದ ಇರಿದು ಅಣ್ಣ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ. ಗೋಕಾಕ್ ನಗರದ ನಿವಾಸಿ ಮುನಾಫ್ ದೇಸಾಯಿ (24) ಕೊಲೆಗೀಡಾದ ಸಹೋದರ. ರಮಜಾನ್ ದೇಸಾಯಿ(26) ಕೊಲೆ ಮಾಡಿದ ಆರೋಪಿ.
ಮುನಾಫ್ ದೇಸಾಯಿ ತನ್ನ ತಂದೆ- ತಾಯಿಯೊಂದಿಗೆ ಯಾವುದೋ ಕಾರಣಕ್ಕೆ ಗಲಾಟೆ ಮಾಡುತ್ತಿದ್ದನಂತೆ. ಈ ವೇಳೆ ಮಧ್ಯಪ್ರವೇಶಿಸಿದ ಆತನ ಸಹೋದರ ರಮಜಾನ್ ತಂದೆ-ತಾಯಿ ಜೊತೆ ಯಾಕೆ ಕಿತ್ತಾಡುತ್ತೀಯಾ ಎಂದು ಪ್ರಶ್ನೆ ಮಾಡಿದ್ದಾನೆ. ಇದರಿಂದ ಸಹೋದರರ ಮಧ್ಯೆ ವಾಗ್ವಾದ ಉಂಟಾಗಿದೆ. ಗಲಾಟೆ ತಾರಕಕ್ಕೇರಿ ಮನೆಯಲ್ಲಿದ್ದ ಚಾಕುವಿನಿಂದ ಅಣ್ಣ ರಮಜಾನ್ನು ತಮ್ಮ ಮುನಾಫ್ ಹೊಟ್ಟೆಗೆ ಇರಿದಿದ್ದಾನೆ.