ಬೆಳಗಾವಿ:ಮೂರು ಕರಡಿಗಳು ರೈತನ ಮೇಲೆ ಏಕಾಏಕಿ ದಾಳಿ ನಡೆಸಿರುವ ಘಟನೆ ಖಾನಾಪುರ ತಾಲೂಕಿನ ಡೊಂಗರಗಾಂವ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಒಟ್ಟಿಗೇ ಮೂರು ಕರಡಿಗಳ ದಾಳಿ: ರೈತನ ಸ್ಥಿತಿ ಗಂಭೀರ - undefined
ಮೂರು ಕರಡಿಗಳು ದಾಳಿ ನಡೆಸಿದ ಪರಿಣಾಮ ರೈತನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೈತನ ಸ್ಥಿತಿ ಗಂಭೀರ
ಡೊಂಗರಗಾಂವ್ ಗ್ರಾಮದ ನಿವಾಸಿ ನಾಮದೇವ ಪಾಲಕರ್ (55) ಕರಡಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಮೂರು ಕರಡಿಗಳು ಮೈಮೇಲೆ ಎರಗಿವೆ.
ಕರಡಿ ದಾಳಿಯಿಂದ ರೈತನ ಸೊಂಟದ ಭಾಗ, ಕಾಲು ಹಾಗೂ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಸ್ಥಳಿಯರು ರೈತನನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.