ಕರ್ನಾಟಕ

karnataka

ETV Bharat / city

15 ದಿನ,700 ಕಿ.ಮೀ.. ಮರಗಾಲು ಕಟ್ಟಿಕೊಂಡು ಶ್ರೀಶೈಲಕ್ಕೆ ಪಾದಯಾತ್ರೆ ಹೊರಟ ಭಕ್ತ.. - ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ

ಯುಗಾದಿ ಹಬ್ಬದ ಪ್ರಯುಕ್ತ ಉತ್ತರ ಕರ್ನಾಟಕ ಜನರು ಆಂಧ್ರಪ್ರದೇಶದ ಶ್ರೀಶೈಲಂ ಮಲ್ಲಿಕಾರ್ಜುನ ದರ್ಶನಕ್ಕೆ ಪ್ರತಿ ಗ್ರಾಮದಿಂದ 100ಕ್ಕೂ ಹೆಚ್ಚು ಭಕ್ತರು ಹೋಗುವುದು ವಾಡಿಕೆ..

A devotee hiking to Shreeshaila On Maragalu
ಮರಗಾಲು ಕಟ್ಟಿಕೊಂಡು ಶ್ರೀಶೈಲಕ್ಕೆ ನಡೆದ ಭಕ್ತ

By

Published : Mar 21, 2022, 1:39 PM IST

ಅಥಣಿ :ದೇವಸ್ಥಾನ, ಪುಣ್ಯ ಕ್ಷೇತ್ರಗಳಿಗೆ ಕೆಲವರು ಪಾದಯಾತ್ರೆ ಮುಖಾಂತರ ಹೋಗುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಭಕ್ತ ಮರಗಾಲು ಕಟ್ಟಿಕೊಂಡು ದೂರದ ಆಂಧ್ರಪ್ರದೇಶದ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದಾರೆ.

ಮರಗಾಲು ಕಟ್ಟಿಕೊಂಡು ಶ್ರೀಶೈಲಕ್ಕೆ ಪಾದಯಾತ್ರೆ ಹೊರಟ ಭಕ್ತ..

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದೇವರಹಟ್ಟಿ ಗ್ರಾಮದವರು ಪಾದಯಾತ್ರೆ ಮುಖಾಂತರ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಹೊರಟಿದ್ದಾರೆ. ಇದರಲ್ಲಿ ಓರ್ವ ಯುವಕ ದಶರಥ್ ನಾಯ್ಕ್ ಮರಗಾಲು ಕಟ್ಟಿಕೊಂಡು ಪಾದಯಾತ್ರೆ ಮುಖಾಂತರ ತಮ್ಮ ಭಕ್ತಿ ಪರಾಕಾಷ್ಠೆ ಮೆರೆಯುತ್ತಿದ್ದಾರೆ.

ಅಥಣಿ ತಾಲೂಕಿನ ದೇವರಹಟ್ಟಿ ಗ್ರಾಮದಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಸರಿ ಸುಮಾರು 700 ಕಿಲೋಮೀಟರ್ ದೂರದವಿದೆ. 15 ದಿನಗಳವರೆಗೆ ಪಾದಯಾತ್ರೆ ಮುಖಾಂತರ ತೆರಳುತ್ತಾರೆ.

ಯುಗಾದಿ ಹಬ್ಬದ ಪ್ರಯುಕ್ತ ಉತ್ತರ ಕರ್ನಾಟಕ ಜನರು ಆಂಧ್ರಪ್ರದೇಶದ ಶ್ರೀಶೈಲಂ ಮಲ್ಲಿಕಾರ್ಜುನ ದರ್ಶನಕ್ಕೆ ಪ್ರತಿ ಗ್ರಾಮದಿಂದ 100ಕ್ಕೂ ಹೆಚ್ಚು ಭಕ್ತರು ಹೋಗುವುದು ವಾಡಿಕೆ.

ABOUT THE AUTHOR

...view details