ಬೆಳಗಾವಿ:ಶೌಚಾಲಯಕ್ಕೆಂದು ಹೇಳಿ ಮನೆಯಿಂದ ಹೋಗಿದ್ದ ಬಾಲಕ ಕಾಣೆ ಆಗಿರುವ ಘಟನೆ ನಗರದ ಅನಗೋಳದ ಬಾಳೇಕುಂದ್ರಿ ಚಾಳ್ನಲ್ಲಿ ನಡೆದಿದೆ.
ಶೌಚಾಲಯಕ್ಕೆಂದು ಹೇಳಿ ಹೋದ ಬಾಲಕ ಕಾಣೆ - ಅನಗೋಳದ ಬಾಳೇಕುಂದ್ರಿ ಚಾಳ್
ಶೌಚಾಲಯಕ್ಕೆಂದು ಹೇಳಿ ಮನೆಯಿಂದ ಹೋಗಿದ್ದ ಬಾಲಕ 10 ದಿನ ಕಳೆದರೂ ಮನೆಗೆ ಬಂದಿಲ್ಲ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಕ ಕಾಣೆ
ಸುಮೀತ್ ಕೇಶವ್ ಜಾಂಗಳೆ (14) ಕಾಣೆಯಾದ ಬಾಲಕ. ಅನಗೋಳದ ಬಾಳೆಕುಂದ್ರಿಚಾಳ್ನ ಕೊರವಿ ಗಲ್ಲಿಯಲ್ಲಿರುವ ತಮ್ಮ ಮನೆಯಿಂದ ಆಗಸ್ಟ್ 19 ರಂದು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಬಾಲಕ ಹೋಗಿದ್ದಾನೆ. ಆದರೆ 10 ದಿನ ಕಳೆದರೂ ಬಾಲಕ ಇನ್ನೂ ಮನೆಗೆ ಮರಳಿಲ್ಲ.
ಆತಂಕಗೊಂಡಿರುವ ಪೋಷಕರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.