ಕರ್ನಾಟಕ

karnataka

ETV Bharat / city

ನುಗ್ಗೆಕಾಯಿ ಕೀಳುವ ವೇಳೆ ವಿದ್ಯುತ್ ತಂತಿ ತಗುಲಿ ಬಾಲಕ ಸಾವು! - undefined

ಹೊಲದ ಪಕ್ಕದಲ್ಲಿದ್ದ ನುಗ್ಗೆಗಿಡದಲ್ಲಿನ ಕಾಯಿ ಕೀಳಲು ಹೋದ ಬಾಲಕ ವಿದ್ಯುತ್​ ತಂತಿ ತಗುಲಿ ಮೃತಪಟ್ಟಿದ್ದಾನೆ.

ಬಾಲಕ ದೀಪಕ ಶಿವಾಜಿ ಪೋಂಗ

By

Published : Mar 25, 2019, 4:56 PM IST

ಚಿಕ್ಕೋಡಿ :ನುಗ್ಗೆ ಗಿಡ ಹತ್ತಿ, ಕಾಯಿ ಕೀಳುವ ವೇಳೆ ಗಿಡದ ಕೊಂಬೆ ಮುರಿದ ಕಾರಣ ಪಕ್ಕದಲ್ಲಿದ್ದ ವಿದ್ಯುತ್ ತಂತಿಗೆ ಕೈ ತಗಲಿ ಬಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹುಕ್ಕೇರಿಯಲ್ಲಿ ನಡೆದಿದೆ.

ತಾಲೂಕಿನ ಯಮಕನಮರಡಿ ಗ್ರಾಮದ ಲಕ್ಷ್ಮಿ ನಗರದಲ್ಲಿ ಈ ಅವಘಡ ‌ಸಂಭವಿಸಿದ್ದು. ದೀಪಕ ಶಿವಾಜಿ ಪೋಂಗ(14) ಮೃತಪಟ್ಟಬಾಲಕ. ಈತ ಇಲ್ಲಿನ ಸಿಇಎಸ್ ಹೈಸ್ಕೂಲ್‌ನಲ್ಲಿ 8ನೇ ತರಗತಿ ಓದುತ್ತಿದ್ದ. ಹೊಲದ ದಂಡೆಯಲ್ಲಿರುವ ನುಗ್ಗೆ ಗಿಡ ಹತ್ತಿ, ಕಾಯಿ ಕೀಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಯಮಕನಮರಡಿ ಪಿಎಸ್ಐ ಸಂಗಮೇಶ ಬಿಡಿಗನಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details