ಬೆಳಗಾವಿ: ಜಿಲ್ಲೆಯಲ್ಲಿ 9 ಬ್ಲ್ಯಾಕ್ ಫಂಗಸ್, ಎರಡು ವೈಟ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ ಇಬ್ಬರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಶಶಿಕಾಂತ ಮುನ್ಯಾಳ ಮಾಹಿತಿ ನೀಡಿದ್ದಾರೆ.
ನಗರದ ಚೆನ್ನಮ್ಮ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ನಂತರ ಕಳೆದ 15 ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ಕೇಸ್‍ಗಳು ಪತ್ತೆಯಾಗುತ್ತಿವೆ. ಜಿಲ್ಲೆಯಲ್ಲಿ ಈಗಾಗಲೇ 9 ಬ್ಲ್ಯಾಕ್ ಫಂಗಸ್ ಹಾಗೂ ಎರಡು ವೈಟ್ ಫಂಗಸ್ ಪ್ರಕರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ ಇಬ್ಬರು ಸೋಂಕಿತರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಕೋವಿಡ್ ಚಿಕಿತ್ಸೆಯ ಉಪಚಾರದಿಂದ ಆಗುತ್ತಿರುವ ಅಡ್ಡಪರಿಣಾಮಗಳಿಂದ ಬ್ಲ್ಯಾಕ್ ಮತ್ತು ವೈಟ್ ಫಂಗಸ್ಗಳು ಬರುತ್ತಿವೆ ಎಂದಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಶಶಿಕಾಂತ ಮುನ್ಯಾಳ ಮಾಹಿತಿ ಆಕ್ಸಿಜನ್ ಪೈಪ್‍ಲೈನ್‍ನಲ್ಲಿ ಸಾಂಸರ್ಗಿಕ ನೀರು ಹಾಗೂ ಅಸಮರ್ಪಕ ನೀರಿನ ಬಳಕೆಯಿಂದಲೂ ಉಂಟಾಗುತ್ತಿದ್ದು, ರೋಗಿಗಳಿಗೆ ಹಾಕಿದ ಪೈಪ್‍ಲೈನ್‍ನ್ನು 48 ಗಂಟೆಗಳಲ್ಲಿ ಬದಲಾಯಿಸಬೇಕು. ಮಾಸ್ಕ್ಅನ್ನು ಪ್ರತಿನಿತ್ಯ ಬದಲಾಯಿಸಬೇಕು. ಬಿಸಿ ನೀರಿನಲ್ಲಿ ತೊಳೆಯಬೇಕು. ಬಿಸಿಲಿನಲ್ಲಿ ಒಣಗಿಸಿ ಸ್ವಚ್ಛವಾದ ಬಟ್ಟೆಯ ಮಾಸ್ಕ್ ಬಳಸಬೇಕು. ಎರಡು-ಮೂರು ದಿನ ಒಂದೇ ಮಾಸ್ಕ್ ಉಪಯೋಗಿಸುವುದರಿಂದ ಬೆವರಿನ ಪ್ರಮಾಣ ಅಥವಾ ಇನ್ನಿತರ ತೇವಾಂಶ ಹೆಚ್ಚಾಗಿ ಫಂಗಸ್ಗಳು ಬೆಳವಣಿಗೆ ಆಗುತ್ತಿವೆ ಎಂದು ತಿಳಿಸಿದರು.
70 ವರ್ಷ ಮೇಲ್ಪಟ್ಟ ಗೋಕಾಕ್ ಮತ್ತು ಅಥಣಿಯಲ್ಲಿ ತಲಾ ಇಬ್ಬರು ಬ್ಲ್ಯಾಕ್ ಫಂಗಸ್‍ನಿಂದ ಸಾವನ್ನಪ್ಪಿದ್ದಾರೆ. ಇನ್ನುಳಿದವರು ಆಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿರುವಂತೆ ರಾಜ್ಯದ ಆರು ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್‍ಗೆ ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಫಂಗಸ್‍ಗೆ ಚಿಕಿತ್ಸೆ ನೀಡುವ ವ್ಯವಸ್ಥೆ ನಡೆದಿದೆ. ಅದೇ ರೀತಿ ಬಿಮ್ಸ್ ಆಸ್ಪತ್ರೆಯಲ್ಲಿಯೂ ಫಂಗಸ್‍ಗೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.