ಕರ್ನಾಟಕ

karnataka

ಬೆಳಗಾವಿ ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 71 ಪ್ರಕರಣ ದಾಖಲು

By

Published : Nov 28, 2019, 11:00 PM IST

ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 71 ಪ್ರಕರಣ ದಾಖಲಾಗಿದ್ದು, 3.23 ಲಕ್ಷ ರೂ. ನಗದು ಸೇರಿದಂತೆ ಅಕ್ರಮ ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

71 ಪ್ರಕರಣ ದಾಖಲು
71 ಪ್ರಕರಣ ದಾಖಲು

ಬೆಳಗಾವಿ:ಜಿಲ್ಲೆಯಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 71 ಪ್ರಕರಣ ದಾಖಲಾಗಿದ್ದು, 3.23 ಲಕ್ಷ ರೂ. ನಗದು ಸೇರಿದಂತೆ ಅಕ್ರಮ ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಒಟ್ಟಾರೆ 3.23 ಲಕ್ಷ ನಗದು, 5.26 ಲಕ್ಷ ಮೌಲ್ಯದ 1371.99 ಲೀಟರ್‌ ಮದ್ಯ ಹಾಗೂ 4.04 ಲಕ್ಷ ಮೌಲ್ಯದ ಎಂಟು ಬೈಕ್ ಹಾಗೂ ಒಂದು ಸರಕು ಸಾಗಾಣಿಕೆ ವಾಹನ ವಶಪಡಿಸಿಕೊಳ್ಳಲಾಗಿದೆ.

ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ‌‌ ಚಿಹ್ನೆ ಹೊಂದಿರುವ 9600 ಕ್ಯಾಪ್, 22,500 ಶಲ್ಯಗಳನ್ನು ಮಾದರಿ ನೀತಿ ಸಂಹಿತೆ ತಂಡ ವಶಪಡಿಸಿಕೊಂಡಿದೆ. ಪೊಲೀಸ್, ಅಬಕಾರಿ ಮತ್ತು ಎಸ್.ಎಸ್.ಟಿ ತಂಡಗಳು ಪ್ರತ್ಯೇಕವಾಗಿ ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.‌ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಥಣಿ ಮತಕ್ಷೇತ್ರದಲ್ಲಿ 20, ಕಾಗವಾಡದಲ್ಲಿ 18 ಮತ್ತು ಗೋಕಾಕ್​ ಮತ ಕ್ಷೇತ್ರದಲ್ಲಿ 33 ಹೀಗೆ ಒಟ್ಟು 71 ಪ್ರಕರಣಗಳು ದಾಖಲಿಸಲಾಗಿದೆ ಎಂದು ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಜಗದೀಶ್ ರೂಗಿ ತಿಳಿಸಿದ್ದಾರೆ.

ABOUT THE AUTHOR

...view details