ಬೆಳಗಾವಿ: ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಒಂದೇ ಕುಟುಂಬದ ಆರು ಜನ ಸೇರಿ ಎದುರು ಮನೆಯ 8 ವರ್ಷದ ಬಾಲಕಿ ಮೃತಪಟ್ಟಿದ್ದಾರೆ. ಎದುರು ಮನೆಗೆ ಆಡಲು ಹೋಗಿ 8 ವರ್ಷದ ಬಾಲಕಿ ಕಾಶವ್ವ ವಿಠ್ಠಲ ಕೊಳೆಪ್ಪನವರ ಪ್ರಾಣ ಕಳೆದುಕೊಂಡಿದ್ದಾಳೆ.
ಕಾಶವ್ವ ವಿಠ್ಠಲ ಕೊಳೆಪ್ಪನವರ ಅಭ್ಯಾಸ ಮಾಡುತ್ತಿದ್ದಳು. ವಿದ್ಯುತ್ ಕಡಿತದಿಂದಾಗಿ ಓದುವುದನ್ನು ಬಿಟ್ಟು ಎದುರು ಮನೆಗೆ ಆಟ ಆಡಲು ಹೋಗಿದ್ದಳು. ಆ ವೇಳೆ ಖನಗಾಂವಿ ಕುಟುಂಬಸ್ಥರ ಜೊತೆ ಈಗಾಗಲೇ ಬಿದ್ದಿದ್ದ ಮನೆ ಗೋಡೆ ನೋಡಲು ಹೋಗಿದ್ದಳು. ಆಗ ಮತ್ತೊಂದು ಮನೆಯ ಗೋಡೆ ಕುಸಿದು ಬಾಲಕಿ ಸೇರಿ 7 ಜನ ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ ಖನಗಾಂವಿ ಕುಟುಂಬದ 6 ಜನರು ಮೃತಪಟ್ಟಿದ್ದಾರೆ. ಬಡಾಲ ಅಂಕಲಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಾಲಕಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.