ಬೆಳಗಾವಿ:ರಾಜ್ಯಾದ್ಯಂತ ಪದವಿ ಕಾಲೇಜು ಆರಂಭಗೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ ಕೊರೊನಾ ಸ್ಫೋಟಗೊಂಡಿದೆ. ಖಾಸಗಿ ಪದವಿ ಕಾಲೇಜಿನ ಒಟ್ಟು 7 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಬೆಳಗಾವಿಯಲ್ಲಿ ಮತ್ತೊಂದು ಖಾಸಗಿ ಕಾಲೇಜಿನ 7 ಸಿಬ್ಬಂದಿಗೆ ಕೊರೊನಾ ದೃಢ
ಬೆಳಗಾವಿಯಲ್ಲಿ ಕಾಲೇಜು ಸಿಬ್ಬಂದಿಗೆ ಕೊರೊನಾ
08:58 November 21
ಬೆಳಗಾವಿಯಲ್ಲಿ ಕಾಲೇಜು ಸಿಬ್ಬಂದಿಗೆ ಕೊರೊನಾ
ಕಾಲೇಜಿನ 327 ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಅದರಲ್ಲಿ 7 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕಾಲೇಜು ಆರಂಭವಾದ ಬಳಿಕ ಶುಕ್ರವಾರ ಕಾಲೇಜುವೊಂದರ 6 ಜನ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿತ್ತು. ಇದೀಗ ಮತ್ತೊಂದು ಕಾಲೇಜಿನ 7 ಸಿಬ್ಬಂದಿಗೆ ಸೋಂಕು ತಗುಲಿದೆ.
ಕೊರೊನಾ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆ ಪೋಷಕರು, ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.
Last Updated : Nov 21, 2020, 10:02 AM IST