ಬೆಳಗಾವಿ :ದೆಹಲಿಯ ಮರ್ಕಜ್ ಧಾರ್ಮಿಕ ಸಭೆಗೆ ಹೋಗಿ ಬಂದಿರುವ ಜಿಲ್ಲೆಯ 62 ಜನರ ಮಾಹಿತಿ ಲಭಿಸಿದೆ. ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್ ಬಿ ಬೊಮ್ಮನಹಳ್ಳಿ ತಿಳಿಸಿದ್ದಾರೆ.
ನಿಜಾಮುದ್ದೀನ್‌ಗೆ ತೆರಳಿದ್ದ ಬೆಳಗಾವಿಯ 62 ಮಂದಿಗೆ ಕೊರೊನಾ ಲಕ್ಷಣಗಳಿಲ್ಲ.. - District Collector Dr. S. B. Bommanahalli
62ರ ಜನರ ಪೈಕಿ ಡಯಾಬಿಟೀಸ್, ಅಸ್ತಮಾ, ಹೈಪರ್ ಟೆನ್ಷನ್ ಹೊಂದಿರುವ ಐವತ್ತಕ್ಕೂ ಅಧಿಕ ವಯೋಮಾನದ 27 ಜನರನ್ನ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಗೆ ಕರೆತಂದು ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ.
![ನಿಜಾಮುದ್ದೀನ್‌ಗೆ ತೆರಳಿದ್ದ ಬೆಳಗಾವಿಯ 62 ಮಂದಿಗೆ ಕೊರೊನಾ ಲಕ್ಷಣಗಳಿಲ್ಲ.. 62 people in the district who attended the Markaz religious meeting had no symptoms of infection](https://etvbharatimages.akamaized.net/etvbharat/prod-images/768-512-6623511-86-6623511-1585745125058.jpg)
ಮರ್ಕಜ್ ಧಾರ್ಮಿಕ ಸಭೆಗೆ ಹೋದ ಜಿಲ್ಲೆಯ 62 ಜನರಲ್ಲಿ ಸೋಂಕಿನ ಲಕ್ಷಣಗಳಿಲ್ಲ
62ರ ಜನರ ಪೈಕಿ ಡಯಾಬಿಟೀಸ್, ಅಸ್ತಮಾ, ಹೈಪರ್ ಟೆನ್ಷನ್ ಹೊಂದಿರುವ ಐವತ್ತಕ್ಕೂ ಅಧಿಕ ವಯೋಮಾನದ 27 ಜನರನ್ನ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಗೆ ಕರೆತಂದು ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. ಈವರೆಗೆ ನಡೆಸಲಾದ ವೈದ್ಯಕೀಯ ತಪಾಸಣೆಯ ಪ್ರಕಾರ ಯಾರಿಗೂ ಕೊರೊನಾ ಸೋಂಕಿನ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.