ಬೆಳಗಾವಿ :ಯುವಕನೋರ್ವ ಸಂಶಯಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಬೆನಕನಹಳ್ಳಿ ಗ್ರಾಮದ ಸಂಜಯ್ ಭರಮಾ ಪಾಟೀಲ (31) ಮೃತ ದುರ್ದೈವಿ. ಬೆನಕನಹಳ್ಳಿ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಸಂಜಯ್ ಪಾಟೀಲ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಳಗಾವಿಯಲ್ಲಿ ಯುವಕ ಅನುಮಾನಾಸ್ಪದ ಸಾವು : ಕೊಲೆಯೋ, ಆತ್ಮಹತ್ಯೆಯೋ? - ಬೆಳಗಾವಿಯಲ್ಲಿ ಯುವಕ ಅನುಮಾನಾಸ್ಪದ ಸಾವು
ಕಳೆದ ಕೆಲವು ದಿನಗಳಿಂದ ಸಂಜಯ್ ಮನೆ ಪಕ್ಕದ ಹುಡುಗಿಯನ್ನು ರೇಗಿಸುತ್ತಿದ್ದನಂತೆ. ನಿನ್ನೆ (ಶುಕ್ರವಾರ) ರಾತ್ರಿ ಯುವತಿ ಮನೆ ಬಾಗಿಲು ಬಡಿದು ಸಂಜಯ್ ರಂಪಾಟ ಮಾಡಿದ್ದಾನೆ. ಆಗ ಯುವತಿ ಕುಟುಂಬಸ್ಥರು ಸಂಜಯ್ ಮೇಲೆ ಹಲ್ಲೆ ಮಾಡಿದ್ದಾರೆ. ಬೆಳಗ್ಗೆ ಹೊತ್ತಿಗೆ ಗ್ರಾಮದ ಹೊರವಲಯದಲ್ಲಿ ಸಂಜಯ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ..
ಕಳೆದ ಕೆಲವು ದಿನಗಳಿಂದ ಸಂಜಯ್ ಮನೆ ಪಕ್ಕದ ಹುಡುಗಿಯನ್ನು ರೇಗಿಸುತ್ತಿದ್ದನಂತೆ. ನಿನ್ನೆ (ಶುಕ್ರವಾರ) ರಾತ್ರಿ ಯುವತಿ ಮನೆ ಬಾಗಿಲು ಬಡಿದು ಸಂಜಯ್ ರಂಪಾಟ ಮಾಡಿದ್ದಾನೆ. ಆಗ ಯುವತಿ ಕುಟುಂಬಸ್ಥರು ಸಂಜಯ್ ಮೇಲೆ ಹಲ್ಲೆ ಮಾಡಿದ್ದಾರೆ. ಬೆಳಗ್ಗೆ ಹೊತ್ತಿಗೆ ಗ್ರಾಮದ ಹೊರವಲಯದಲ್ಲಿ ಸಂಜಯ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ.
ಆದರೆ, ಸಂಜಯ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಲಾಗಿದೆ ಎಂದು ಸಂಜಯ್ ಪೋಷಕರು ಯುವತಿ ಕುಟುಂಬಸ್ಥರ ವಿರುದ್ಧ ಆರೋಪಿಸುತ್ತಿದ್ದಾರೆ. ಸ್ಥಳಕ್ಕೆ ಎಫ್ಎಸ್ಎಲ್ ತಂಡದ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.